ಪ್ರಸೂತಿ ಕಾಯ್ದೆ ತಿದ್ದುಪಡಿಗೆ ರಾಜ್ಯಸಭೆ ಅನುಮೋದನೆ

ಹೆರಿಗೆ ರಜೆಯನ್ನು 12 ವಾರದಿಂದ 26 ವಾರದವರೆಗೆ ವಿಸ್ತರಿಸಿರುವ ಪ್ರಸೂತಿ ಕಾಯ್ದೆ ತಿದ್ದುಪಡಿ ಮಸೂದೆಗೆ ರಾಜ್ಯಸಭೆ ಅನುಮೋದನೆ ನೀಡಿದೆ...
ರಾಜ್ಯಸಭಾ
ರಾಜ್ಯಸಭಾ

ನವದೆಹಲಿ: ಹೆರಿಗೆ ರಜೆಯನ್ನು 12 ವಾರದಿಂದ 26 ವಾರದವರೆಗೆ ವಿಸ್ತರಿಸಿರುವ ಪ್ರಸೂತಿ ಕಾಯ್ದೆ ತಿದ್ದುಪಡಿ ಮಸೂದೆಗೆ ರಾಜ್ಯಸಭೆ ಅನುಮೋದನೆ ನೀಡಿದೆ.

ಮಹಿಳೆಯರಿಗೆ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಪ್ರಸೂತಿ ಕಾಯ್ತೆಗೆ ತಿದ್ದುಪಡಿ ತರಲು ತೀರ್ಮಾನಿಸಿತ್ತು. ಲೋಕಸಭೆಯಲ್ಲಿ ಅನುಮೋದನೆಗೊಂಡಿದ್ದ ಈ ಕಾಯ್ದೆಗೆ ಇದೀಗ ರಾಜ್ಯಸಭೆಯಲ್ಲೂ ಅನುಮೋದನೆಗೊಂಡಿದ್ದು ಶಿಶು ಪಾಲನೆಗೆ ಹೆಚ್ಚು ಅವಕಾಶ ಸಿಗುವಂತಾಗಿದೆ. ಜತೆಗೆ ಮಾತೃತ್ವದ ರಜೆಗೆ ತೆರಳುವ ಸ್ತ್ರೀಯರು ಪ್ರಸೂತಿ ಸಮಯದಲ್ಲಿ ವೆಚ್ಚವಾದ ಹಣವನ್ನು ಹಿಂಪಡೆಯಲು ಕೆಲ ಕಂಪನಿಗಳಿಗೆ ವೆಚ್ಚದ ಪ್ರತಿ ಸಲ್ಲಿಸಬಹುದಾಗಿದೆ. ಇದರಿಂದ ಮಹಿಳಾ ಉದ್ಯೋಗಿಗಳ ಕಾರ್ಯಕ್ಷಮತೆ ಹೆಚ್ಚಿಸಲ ಸಹಕಾರಿ ಎಂದು ಮಸೂದೆ ನಮೂದಿಸಿದೆ.

1961ರ ಪ್ರಸೂತಿ ಕಾಯ್ದೆ ಅನ್ವಯ ಗರ್ಭ ಧರಿಸಿದ ನಂತರ ಹಾಗೂ ಶಿಶು ಪಾಲನೆಗೆ ಗೈರಾಗುವ ದಿನದಲ್ಲಿ ಪೂರ್ಣ ಸಂಬಂಳ ಪಡೆಯಲು ಮಹಿಳೆಯರು ಅರ್ಹರಿದ್ದಾರೆ. ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ 10ಕ್ಕೂ ಅಧಿಕ ಉದ್ಯೋಗಸ್ಥ ಮಹಿಳೆಯರಿಗೆ ಇದು ಅನ್ವಯಿಸುತ್ತದೆ. ಕಾಯ್ದೆ ತಿದ್ದುಪಡಿಯಿಂದ 1.8 ಕೋಟಿ ಉದ್ಯೋಗಸ್ಥ ಮಹಿಳೆಯರಿಗೆ ಸಹಾಯವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com