ಯುಪಿಎಸ್ ಸಿ ಪರೀಕ್ಷೆ ಬರೆಯಲು ಇರುವ ವಯೋಮಿತಿ ಇಳಿಕೆಗೆ ಶಿಫಾರಸ್ಸು

ಮುಂಬರುವ ಕೇಂದ್ರ ಲೋಕಸೇವಾ ಆಯೋಗಕ್ಕೆ ನಡೆಸಲಾಗುವ ಪರೀಕ್ಷೆಯಲ್ಲಿ ಮಹತ್ತರ ಬದಲಾವಣೆಗಳಾಗುವ ಸಾಧ್ಯತೆ ಇದೆ.
ಯುಪಿಎಸ್ ಸಿ ಪರೀಕ್ಷೆ ಬರೆಯಲು ಇರುವ ವಯೋಮಿತಿ ಇಳಿಕೆಗೆ ಶಿಫಾರಸ್ಸು
ಯುಪಿಎಸ್ ಸಿ ಪರೀಕ್ಷೆ ಬರೆಯಲು ಇರುವ ವಯೋಮಿತಿ ಇಳಿಕೆಗೆ ಶಿಫಾರಸ್ಸು

ನವದೆಹಲಿ: ಮಾಜಿ ಶಿಕ್ಷಣ ಕಾರ್ಯದರ್ಶಿ ಬಿಎಸ್ ಬಸ್ವಾನ್ ಅಧ್ಯಕ್ಷತೆಯ ಸಮಿತಿ ನೀಡಿರುವ ಶಿಫಾರಸ್ಸನ್ನು ಕೇಂದ್ರ ಸರ್ಕಾರ ಅಂಗೀಕರಿಸಿದ್ದೇ ಆದಲ್ಲಿ, ಮುಂಬರುವ ಕೇಂದ್ರ ಲೋಕಸೇವಾ ಆಯೋಗಕ್ಕೆ ನಡೆಸಲಾಗುವ ಪರೀಕ್ಷೆಯಲ್ಲಿ ಮಹತ್ತರ ಬದಲಾವಣೆಗಳಾಗುವ ಸಾಧ್ಯತೆ ಇದೆ.

ಯುಪಿಎಸ್ ಸಿ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಭ್ಯರ್ಥಿಯ ಗರಿಷ್ಠ ವಯೋಮಿತಿಯನ್ನು ಕಡಿಮೆಗೊಳಿಸಲು ಬಿಎಸ್ ಬಸ್ವಾನ್ ಸಮಿತಿ ಶಿಫಾರಸ್ಸು ಮಾಡಿದ್ದು, ಒಮ್ಮತ ಮೂಡಿದ ಬಳಿಕ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಪ್ರಸ್ತುತ ಯುಪಿಎಸ್ ಸಿ ಪರೀಕ್ಷೆಯನ್ನು ತೆಗೆದುಕೊಳ್ಳುವುದಕ್ಕೆ ಇರುವ ಗರಿಷ್ಠ ವಯೋಮಿತಿ 32 ವರ್ಷವಾಗಿದ್ದು, ಇದನ್ನು 27 ವರ್ಷಕ್ಕೆ ಇಳಿಕೆ ಮಾಡಲು ಶಿಫಾರಸು ಮಾಡಲಾಗಿದೆ.

ಬಸ್ವಾನ್ ನೀಡಿರುವ ವರದಿಯನ್ನು ಮೊದಲು ಯುಪಿಎಸ್‍ಸಿ ಪರಿಶೀಲನೆ ನಡೆಸಲಿದ್ದು, ಯುಪಿಎಸ್‍ಯ ಸಲಹೆ ಮೇರೆಗೆ ಕೇ೦ದ್ರ ಈ ಕುರಿತು ನಿರ್ಧಾರ ಕೈಗೊಳ್ಳಲಿದೆ. ನಾಗರಿಕ ಸೇವಾ ಪರೀಕ್ಷೆಯನ್ನು ಪ್ರಾಥಮಿಕ, ಮುಖ್ಯಪರೀಕ್ಷೆ , ಸ೦ದರ್ಶನ ಎ೦ಬ ಮೂರು ಹ೦ತಗಳಲ್ಲಿ ನಡೆಸಲಾಗುತ್ತದೆ. ಪ್ರತಿ ವರ್ಷ ಈ ಪರೀಕ್ಷೆ ನಡೆಸಲಾಗುತ್ತಿದ್ದು, ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ವಿದೇಶಿ ಸೇವೆ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಗೆ ಅಭ್ಯಥಿ೯ಗಳ ಆಯ್ಕೆ ನಡೆಯುತ್ತದೆ. ಸದ್ಯ ಗರಿಷ್ಟ ಎಸ್‍ಸಿ ಎಸ್‍ಟಿ ಅಭ್ಯಥಿ೯ಗಳಿಗೆ ಐದು ವಷ೯ ಹೆಚ್ಚಿನ ಕಾಲಾವಕಾಶ ನೀಡಲಾಗಿದ್ದು, ಹಿ೦ದುಳಿದ ವಗ೯ದವರಿಗೆ ಮೂರು ವರ್ಷ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ. ದಿವ್ಯಾ೦ಗರಿಗೆ 10 ವರ್ಷ ಹೆಚ್ಚಿನ ಅವಕಾಶ ಒದಗಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com