92 ವರ್ಷದ ಪದ್ಧತಿಗೆ ಎಳ್ಳುನೀರು: 2017 ರಿಂದ ಒಂದೇ ಬಜೆಟ್

92 ವರ್ಷಗಳಿಂದಲೂ ನಡೆಸಿಕೊಂಡು ಬಂದಿದ್ದ ಪದ್ಧತಿಯನ್ನು ಕೈಬಿಡಲು ನಿರ್ಧರಿಸಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇನ್ಮುಂದೆ..
ಸುರೇಶ್ ಪ್ರಭು
ಸುರೇಶ್ ಪ್ರಭು

ನವದೆಹಲಿ: 92 ವರ್ಷಗಳಿಂದಲೂ ನಡೆಸಿಕೊಂಡು ಬಂದಿದ್ದ ಪದ್ಧತಿಯನ್ನು ಕೈಬಿಡಲು ನಿರ್ಧರಿಸಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇನ್ಮುಂದೆ ಒಂದೇ ಬಜೆಟ್ ಮಂಡಿಸಲು ತಿರ್ಮಾನಿಸಿದೆ.

ಇಷ್ಟು ವರ್ಷ ರೈಲ್ವೆ ಬಜೆಟನ್ನು ಪ್ರತ್ಯೇಕವಾಗಿ ಮಂಡಿಸಲಾಗುತ್ತಿತ್ತು. ಆದರೆ ಮುಂದಿನ ಆರ್ಥಿಕ ವರ್ಷದಿಂದ ಪ್ರತ್ಯೇಕ ರೈಲ್ವೆ ಬಜೆಟ್ ಮಂಡಿಸದೆ ಸಾಮಾನ್ಯ ಬಜೆಟ್‍ನಲ್ಲೇ ಸೇರಿಸುವ ಪ್ರಸ್ತಾವನೆಗೆ ಹಣಕಾಸು ಸಚಿವ ಸಚಿವ ಅರುಣ್ ಜೇಟ್ಲಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.

1924ರ ಬ್ರಿಟೀಷ್ ಆಳ್ವಿಕೆಯಿಂದ ಜಾರಿಯಲ್ಲಿ ಪದ್ಧತಿಗೆ ಮೋದಿ ಸರ್ಕಾರ ಎಳ್ಳು ನೀರು ಬಿಡುತ್ತಿದೆ. ಅರುಣ್ ಜೇಟ್ಲಿ 5 ಮಂದಿ ಸದಸ್ಯರನ್ನೊಳಗೊಂಡ ಕಮಿಟಿ ರಚಿಸಿದ್ದು, ಇದರ ಸಾಧಕ ಬಾದಕಗಳ ಬಗ್ಗೆ ಮಾಹಿತಿ ಕಲೆ ಹಾಕ್ತಿದ್ದಾರೆ.

ಒಂದು ವೇಳೆ ಈ ಪ್ಲಾನ್ ಸಕ್ಸಸ್ ಆದ್ರೆ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆಯಾಗಲಿದ್ದು, ರೈಲ್ವೆ ಕ್ಷೇತ್ರದ ಅಭಿವೃದ್ಧಿಗೆ ಸಹಾಯಕವಾಗಲಿದೆ. ಈ ಸಂಬಂಧ ರೈಲ್ವೆ ಸಚಿವ ಸುರೇಶ್ ಪ್ರಭು ಮಂಗಳವಾರ ರಾಜ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com