ಪ್ರಭಾಕರನ್
ಪ್ರಭಾಕರನ್

ಎಲ್ ಟಿಟಿಇ ಪ್ರಭಾಕರನ್ ಬಂಟ ಗೋಪಾಲಸ್ವಾಮಿ 'ರಾ'ಏಜೆಂಟ್ : ಪುಸ್ತಕ

ಎಲ್ ಟಿಟಿ ಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಬಂಟ ಹಾಗೂ ಎಲ್​ಟಿಟಿಇ ನಾಯಕ ಗೋಪಾಲಸ್ವಾಮಿ ಮಹೇಂದ್ ರಾಜಾ ಅಲಿಯಾಸ್ ...

ನವದೆಹಲಿ: ಎಲ್ ಟಿಟಿ ಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಬಂಟ ಹಾಗೂ ಎಲ್​ಟಿಟಿಇ ನಾಯಕ ಗೋಪಾಲಸ್ವಾಮಿ ಮಹೇಂದ್ ರಾಜಾ ಅಲಿಯಾಸ್  ಮಹತ್ತಾಯ ಭಾರತದ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ (ಆರ್​ಎಡಬ್ಲ್ಯೂ- ರಾ) ಏಜೆಂಟನಾಗಿದ್ದ ಎಂಬ ಮಾಹಿತಿಯನ್ನು ಪುಸ್ತಕವೊಂದು ಬಹಿರಂಗ ಪಡಿಸಿದೆ.

ಮಾಜಿ ಪ್ರಧಾನಿ ರಾಜೀವ ಗಾಂಧಿ ಹತ್ಯೆಯಾಗುವುದಕ್ಕೆ ಕೆಲ ಕ್ಷಣಗಳ ಮುನ್ನ ಸಂದರ್ಶನ ನಡೆಸಿದ್ದ ಪತ್ರಕರ್ತೆ ನೀನಾ ಗೋಪಾಲ್ ಅವರು ತಮ್ಮ ‘ಅಸಾಸಿನೇಷನ್ ಆಫ್ ರಾಜೀವ ಗಾಂಧಿ’ (ಪೆಂಗ್ವಿನ್) ಪುಸ್ತಕದಲ್ಲಿ ಈ ವಿಚಾರವನ್ನು ದಾಖಲಿಸಿದ್ದಾರೆ.

ಮಹತ್ತಾಯನನ್ನು 1989ರಷ್ಟು ಹಿಂದೆಯೇ ‘ರಾ’ ಏಜೆಂಟ್ ಆಗಿ ನೇಮಕ ಮಾಡಿ ಪ್ರಭಾಕರನ್ ಬಳಿಗೆ ಕಳುಹಿಸಲಾಗಿತ್ತು. ಬಂಡಾಯ ಚಳವಳಿಯನ್ನು ಒಳಗಿಂದೊಳಗೇ ತನ್ನ ಕೈಗೆ ತೆಗೆದುಕೊಂಡು ಪ್ರಭಾಕರನ್​ನನ್ನು ಮುಗಿಸಿ ಎಲ್​ಟಿಟಿಇ ಸಂಘಟನೆಯನ್ನು ಕೈವಶ ಮಾಡಿಕೊಳ್ಳುವ ಕೆಲಸವನ್ನು ಈತನಿಗೆ ವಹಿಸಲಾಗಿತ್ತು’ ಎಂದು ನೀನಾ ಗೋಪಾಲ್ ಬರೆದಿದ್ದಾರೆ.

ನಂತರ ಗೋಪಾಲ್ ರಾ ಏಜೆಂಟ್ ಎಂಬ ವಿಷಯ ಪ್ರಭಾಕರನ್ ಗೆ ತಿಳಿದು ಅವರನ್ನು ಹತ್ಯೆ ಮಾಡಲಾಯಿತು ಎಂದು ಹೇಳಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com