
ನವದೆಹಲಿ: ಬಲೂಚಿಸ್ತಾನ ಸ್ವತಂತ್ರ್ಯವಾಗಲು ಪ್ರಧಾನಿ ಮೋದಿ ತಮ್ಮ ಬೆಂಬಲ ವ್ಯಕ್ತ ಪಡಿಸಿದ ಬೆನ್ನಲ್ಲೇ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಪಾಕಿಸ್ತಾನ ದೇಶವನ್ನು ನರಕಕ್ಕೆ ಹೋಲಿಸಿದ್ದಾರೆ.
ಪಾಕಿಸ್ತಾನಕ್ಕೆ ಹೋಗುವುದು, ನರಕಕ್ಕೆ ಹೋಗುವುದು ಎರಡೂ ಒಂದೇ ಎಂದು ಹೇಳಿರುವ ಮನೋಹರ್ ಪರಿಕ್ಕರ್ ವ್ಯಂಗ್ಯವಾಡಿದ್ದಾರೆ.ಪಾಕಿಸ್ತಾನ ದೊಡ್ಡ ಗಾಯಗಳನ್ನು ಸರಿ ಮಾಡುವ ಬದಲು ಸಣ್ಣ ಸಣ್ಣ ಗಾಯಗಳತ್ತ ಗಮನ ಹರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕಾಶ್ಮೀರ ಮತ್ತು ಬಲೂಚಿಸ್ತಾನವನ್ನು ಪಾಕಿಸ್ತಾನ ತುಳಿಯಲು ಆಗುವುದಿಲ್ಲ ಎಂದು ನಿನ್ನೆಯಷ್ಟೇ ಪ್ರಧಾನಿ ಮೋದಿ ಹೇಳಿಕೆ ನೀಡಿದ್ದರು. ಇದಾದ ನಂತರ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನ ವಿದೇಶಾಂಗ ವ್ಯವಾರಗಳ ಸಲಹೆಗಾರ ಸರ್ತಾಜ್ ಅಜೀಜ್ , ಕಾಶ್ಮೀರ ಸಮಸ್ಯೆಯಿಂದ ಪ್ರಪಂಚದ ಗಮನವನ್ನು ಬೇರೆಡೆ ತಿರುಗಿಸಲು ಬಲೂಚಿಸ್ತಾನ ವಿಷಯವನ್ನು ಮಧ್ಯೆ ತರುತ್ತಿದ್ದಾರೆ ಎಂದು ದೂರಿದ್ದರು.
Advertisement