ತಿರುವನಂತಪುರ: ಮಹಿಳೆಯೊಬ್ಬರನ್ನು ಹದಿನಾಲ್ಕು ಸೆಕೆಂಡುಗಳ ಕಾಲ ಎವೆಯಿಕ್ಕದೆ ದಿಟ್ಟಿಸಿ ನೋಡಿದರೂ ಅವರ ವಿರುದ್ಧ ಕೇಸ್ ದಾಖಲಿಸಬಹುದು ಎಂದು ಕೇರಳ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಹಿಳೆಯನ್ನು ದಿಟ್ಟಿಸಿ ನೋಡಿದವರ ವಿರುದ್ಧವೂ ಕೇಸ್ ದಾಖಲಿಸುವಂತಹ ಅವಕಾಶಗಳು ಕಾನೂನಿನಲ್ಲಿದ್ದು, ಒಂದು ವೇಳೆ ನೀವು ಅಂತಹ ಕಿರುಕುಳಕ್ಕೆ ಒಳಗಾದರೆ ದಯವಿಟ್ಟು ಅದನ್ನು ಬಳಸಿ ಎಂದು ಕೇರಳದ ಅಬಕಾರಿ ಆಯುಕ್ತ ರಿಷಿರಾಜ್ ಸಿಂಗ್ ಅವರು ಹೇಳಿದ್ದಾರೆ.
ಕೊಚ್ಚಿಯಲ್ಲಿ ಮಹಿಳೆಯರ ರಕ್ಷಣೆ ಕುರಿತ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಿಂಗ್ ಮಹಿಳೆಯರನ್ನು ದಿಟ್ಟಿಸಿ ನೋಡುವುದು ಸಹ ಕಿರುಕುಳ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ರಿಷಿರಾಜ್ ಸಿಂಗ್ ಅವರ ಈ ಹೇಳಿಕೆ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಟೀಕೆ, ಖಂಡನೆಗೆ ಗುರಿಯಾಗಿದೆ. ಅಲ್ಲದೆ ಕೇರಳದ ಕ್ರೀಡಾ ಸಚಿವ ಇ ಪಿ ಜಯರಾಜನ್ ಅವರು 'ಇದು ಕಿರಿಕಿರಿಯ ಹೇಳಿಕೆ' ಎಂದು ಮೂದಲಿಸಿದ್ದಾರೆ.