ಗ್ರಾಮೀಣ ಸೇವೆ ಮಾಡುವ ವೈದ್ಯ ವಿದ್ಯಾರ್ಥಿಗಳಿಗೆ ಶೇ.30 ರಷ್ಟು ಹೆಚ್ಚುವರಿ ಅಂಕ: ಸುಪ್ರೀಂ ಸಮ್ಮತಿ

ಗ್ರಾಮೀಣ ಭಾಗಗಳಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ಪ್ರೋತ್ಸಾಹ ನೀಡಲು ಸ್ನಾತಕೋತ್ತರ ಪದವಿ ಮಾಡುವ ವೈದ್ಯರಿಗೆ ಶೇ. 30 ರಷ್ಟು ಅಂಕಗಳನ್ನು ಹೆಚ್ಚುವರಿಯಾಗಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಗ್ರಾಮೀಣ ಭಾಗಗಳಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ಪ್ರೋತ್ಸಾಹ ನೀಡಲು ಸ್ನಾತಕೋತ್ತರ ಪದವಿ ಮಾಡುವ ವೈದ್ಯರಿಗೆ ಶೇ. 30 ರಷ್ಟು ಅಂಕಗಳನ್ನು ಹೆಚ್ಚುವರಿಯಾಗಿ ನೀಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಇಚ್ಚಿಸುವ ಎಂಬಿಬಿಎಸ್ ವೈದ್ಯರಿಗೆ ಪಿಜಿ ಕೋರ್ಸ್ ಗೆ ದಾಖಲಾಗುವಾಗ ಒಟ್ಟಾರೆ ಅಂಕಗಳ ಜೊತೆ ಶೇ. 30 ರಷ್ಟು ಹೆಚ್ಚುವರಿ ಅಂಗ ನೀಡಲು ನ್ಯಾಯಮೂರ್ತಿ ಟಿ.ಎಸ್ ಠಾಕೂರ್ ನೇತೃತ್ವದ ನ್ಯಾಯ ಪೀಠ ಸಮ್ಮತಿಸಿದೆ.

ಗ್ರಾಮೀಣ ಭಾಗಗಳಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ಪಿಜಿ ಕೋರ್ಸ್  ಗಳಲ್ಲಿ  ಶೇ.30 ರಷ್ಟು ಹೆಚ್ಚುವರಿ ಅಂಕ ನೀಡಬಾರದು ಎಂದು ಉತ್ತರ ಪ್ರದೇಶ ಸರ್ಕಾರ ರದ್ದುಗೊಳಿಸಿದ್ದ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿತ್ತು. ಅಲಹಾಬಾದ್ ಹೈಕೋರ್ಟ್ ನ ಆದೇಶವನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್, ಮೀಸಲಾತಿ ಅಥವಾ ಯಾವುದೇ ಕಾನೂನುಗಳ ಅಡಿ ಪಿಜಿ ಕೋರ್ಸ್ ಗಳಿಗೆ  ದಾಖಲಾತಿ ನೀಡಲು ಅನುಮತಿ ಇರುವುದಿಲ್ಲ ಎಂದು ಹೇಳಿದೆ.

206-17 ನೇ ಸಾಲಿನಲ್ಲಿ  ಪಿಜಿ ಕೋರ್ಸ್ ಗಳಿಗೆ ದಾಖಲಾತಿ ಬಯಸಿರುವ ವೈದ್ಯ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಸಮ್ಮತಿಸಿದರೇ  ಅಂತವರಿಗೆ ಈ ನಿಯಮ ಅನ್ವಯವಾಗುತ್ತದೆ ಎಂದು ಹೇಳಿದೆ.

ದೇಶಾದ್ಯಂತ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಅಲ್ಲಿ ಸೇವೆ ಸಲ್ಲಿಸಲು ವೈದ್ಯ ವಿದ್ಯಾರ್ಥಿಗಳು ನಿರಾಕರಿಸುತ್ತಿದ್ದು, ಇದರಿಂದ ಹಳ್ಳಿಗಳ ಜನರಿಗೆ ಸರಿಯಾಗ ವೈದ್ಯಕೀಯ ಸೇವೆ ಸಿಗುತ್ತಿಲ್ಲ. ಈ ಕೊರತೆಯನ್ನು ತಪ್ಪಿಸಲು ಸರ್ಕಾರ ವೈದ್ಯ ವಿದ್ಯಾರ್ಥಿಗಳಿಗೆ ಹಲವು ಸೌಲಭ್ಯ ನೀಡುವ ಕುರಿತು ಚಿಂತನೆ ನಡೆಸುತ್ತಿದೆ. ಜೊತೆಗೆ ಗ್ರಾಮೀಣ ಸೇವೆ ಕಡ್ಡಾಯ ಎಂಬ ಆದೇಶಾಜ್ಞೆ ಹೊರಡಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com