
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿರುವ ಎಲ್ಲಾ ಸಚಿವರುಗಳಲ್ಲಿ ಜನರಿಗೆ ಅತ್ಯಂತ ಪ್ರೀತಿ ಪಾತ್ರರಾದವರು ಸುಷ್ಮಾ ಸ್ವರಾಜ್ ಆಗಿದ್ದಾರೆ.
ಸುಷ್ಮಾ ಕುರಿತು ಮಾಡುವ ಎಲ್ಲಾ ಟ್ವೀಟ್ ಗಳಿಗೂ ಕೇಂದ್ರ ವಿದೇಶಾಂಗ ಸಚಿವೆ ತಪ್ಪದೇ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡುತ್ತಾರೆ. ಸ್ವಾತಂತ್ರ್ಯ ದಿನಾಚರಣೆ ವೇಳೆ ಕೆಲ ಶಾಲಾ ಮಕ್ಕಳು ಥೇಟ್ ಸುಷ್ಮಾ ಸ್ವರಾಜ್ ರಂತೆ ಉಡುಗೆ ತೊಟ್ಟಿದ್ದರು. ಈ ಉಡುಗೆ ತೊಟ್ಟ ಮಕ್ಕಳ ಭಾವ ಚಿತ್ರಗಳನ್ನು ಶಾಲಾ ಮಕ್ಕಳ ಪೋಷಕರು ಸುಷ್ಮಾ ಅವರಿಗೆ ಟ್ವೀಟ್ ಮಾಡಿದ್ದಾರೆ.
ಆಗಸ್ಟ್ 12 ರಂದು ರಾಜೇಶ್ ಎಂಬುವರು ತಮ್ಮ ಪುತ್ರಿ ರಿಯಾ ಸುಷ್ಮಾ ಸ್ವರಾಜ್ ರಂತೆ ಜಾಕೆಟ್ ಹಾಕಿಕೊಂಡು ಮರೂನ್ ಬಣ್ಣಹ ಹಣೆಬೊಟ್ಟು ಇಟ್ಟುಕೊಂಡು ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಫೋಟೋ ಅಪ್ ಲೋಡ್ ಮಾಡಿದ್ದರು. ಇದಕ್ಕೆ ಟ್ವೀಟ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಸುಷ್ಮಾ ' ಐ ಲವ್ ಯುವರ್ ಜಾಕೆಟ್' ಎಂದು ಹೇಳಿದ್ದಾರೆ.
ಆಗಸ್ಟ್ 14 ರಂದು ಭವ್ಯಾ ಎಂಬ ಶಾಲಾ ಮಗುವಿನ ಫೋಟೋ ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸುಷ್ಮಾ, ಭವ್ಯಾ, ನನ್ನನ್ನ ನಕಲಿ ಸುಷ್ಮ ಸ್ವರಾಜ್ ಎಂದು ಹಾಗೂ ನಿನ್ನನ್ನು ಅಸಲಿ ಸುಷ್ಮಾ ಸ್ವರಾಜ್ ಎಂದು ಜನ ತಿಳಿದುಕೊಳ್ಳುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
Advertisement