ಮಣಿಪುರ ರಾಜ್ಯಪಾಲರಾಗಿ ನಜ್ಮಾ ಹೆಪ್ತುಲ್ಲಾ ನೇಮಕ

ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಮೂರು ರಾಜ್ಯಗಳಿಗೆ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಹೊಸ...
ನಜ್ಮಾ ಹೆಪ್ತುಲ್ಲಾ
ನಜ್ಮಾ ಹೆಪ್ತುಲ್ಲಾ
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಮೂರು ರಾಜ್ಯಗಳಿಗೆ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಹೊಸ ರಾಜ್ಯಪಾಲರನ್ನು ನೇಮಕಮಾಡಿ ಬುಧವಾರ ಆದೇಶ ಹೊರಡಿಸಿದೆ.
ಮಣಿಪುರ ರಾಜ್ಯಪಾಲರಾಗಿ ನಜ್ಮಾ ಹೆಪ್ತುಲ್ಲಾ, ಅಸ್ಸಾಂ ರಾಜ್ಯಪಾಲರಾಗಿ ಬನ್ವರಿಲಾಲ್ ಪುರೋಹಿತ್, ಪಂಜಾಬ್ ರಾಜ್ಯಪಾಲರಾಗಿ ವಿ.ಪಿ.ಸಿಂಗ್ ಹಾಗೂ ಅಂಡಮಾನ್ ಮತ್ತು ನಿಕೋಬರ್ ಲೆಫ್ಟಿನೆಂಟ್ ಗವರ್ನರ್ ಆಗಿ ಜಗದಿಶ್ ಮುಖಿ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಷ್ಟ್ರಪತಿ ಭವನ ಪ್ರಕಟಣೆಯಲ್ಲಿ ತಿಳಿಸಿದೆ.
ನಜ್ಮಾ ಹೆಪ್ತುಲ್ಲಾ ಅವರನ್ನು ಮೋದಿ ಸಂಪುಟದಿಂದ ಕೈಬಿಟ್ಟ ನಂತರ ಮಣಿಪುರ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.
ತಮಿಳುನಾಡು ರಾಜ್ಯಪಾಲ ಕೆ.ರೋಸಯ್ಯ ಅವರ ಅವಧಿ ಈ ತಿಂಗಳ ಅಂತ್ಯಕ್ಕೆ ಮುಕ್ತಾಯಗೊಳ್ಳುತ್ತಿದ್ದರೂ ಆ ರಾಜ್ಯದ ನೂತನ ರಾಜ್ಯಪಾಲರ ಹೆಸರು ಈ ಪಟ್ಟಿಯಲ್ಲಿ ಪ್ರಕಟವಾಗಿಲ್ಲ. ಈ ಮಧ್ಯೆ, ರೋಸಯ್ಯ ಅವರ ಸ್ಥಾನಕ್ಕೆ ಕರ್ನಾಟಕ ಬಿಜೆಪಿ ನಾಯಕ, ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರ ಹೆಸರು ಬಲವಾಗಿ ಕೇಳಿಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com