ಎನ್ ಸಿ ಪಿ ಶಾಸಕನ ದರ್ಪ, ಸರ್ಕಾರಿ ಅಧಿಕಾರಿಗೆ ಕಪಾಳ ಮೋಕ್ಷ: ವಿಡಿಯೋ ವೈರಲ್

ಎನ್​ಸಿಪಿ ಶಾಸಕ ಹಿರಿಯ ಅಧಿಕಾರಿಯೊಬ್ಬರಿಗೆ ಕಪಾಳಮೋಕ್ಷ ಮಾಡಿ ಅವಮಾನಿಸಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ...
ಶಾಸಕ ಸುರೇಶ್ ಲಾಡ್ ನಿಂದ ಕಪಾಳ ಮೋಕ್ಷ
ಶಾಸಕ ಸುರೇಶ್ ಲಾಡ್ ನಿಂದ ಕಪಾಳ ಮೋಕ್ಷ
Updated on

ಮುಂಬಯಿ: ಎನ್​ಸಿಪಿ ಶಾಸಕ ಹಿರಿಯ ಅಧಿಕಾರಿಯೊಬ್ಬರಿಗೆ ಕಪಾಳಮೋಕ್ಷ ಮಾಡಿ ಅವಮಾನಿಸಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮಹಾರಾಷ್ಟ್ರದ ಕರ್ಜತ್ ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್ ಲಾಡ್ ದರ್ಪ ಪ್ರದರ್ಶಿಸಿ ಈ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಉಪ ಸಂಗ್ರಾಹಕ (ಅಧಿಕಾರಿ) ಅಬಯ್ ಕಲ್ಗುಡ್ಕರ್ ಅವರಿಗೆ ಕಪಾಳ ಮೋಕ್ಷ ಮಾಡಲಾಗಿದೆ ಎಂದು ಹೇಳಲಾಗಿದೆ.

ಭೂಸ್ವಾಧೀನ ಸಂಬಂಧಿತ ಸಮಸ್ಯೆಗಳ ಬಗ್ಗೆ ರ್ಚಚಿಸಲೆಂದು ಸಭೆ ಕರೆಯಲಾಗಿತ್ತು. ಸುರೇಶ್ ಲಾಡ್ ಸೇರಿ, ಹಲವು ರೈತರ ಜಾಗ ಸ್ವಾಧೀನ ಪಡಿಸಿಕೊಂಡ ವಿಚಾರದಲ್ಲಿ ಘರ್ಷಣೆ ತಾರಕಕ್ಕೇರಿದೆ. ಈ ವೇಳೆ ರೈತರಿಗೆ ಪರಿಹಾರ ನೀಡುವ ಸಂಬಂಭ ನಡೆದ ವಾಗ್ವಾದದಿಂದ ಶಾಸಕರು ಅಧಿಕಾರಿಯ ಮೇಲೆ ಕೈ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಸಂಬಂಧ ಅಧಿಕಾರಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶಾಸಕರ ವಿರುದ್ಧ ದೂರು ದಾಖಲಿಸಿದ್ದಾರೆ. ಆದರೆ ಎನ್ ಸಿ ಪಿ ಶಾಸಕ ಸುರೇಶ್ ಲಾಡ್ ಆರೋಪವನ್ನು ನಿರಾಕರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com