ತಮ್ಮ ವಿರುದ್ಧ ವಿ.ಕೆ.ಸಿಂಗ್ ಅಕ್ರಮ ನಿಷೇಧ ಹೇರಿದ್ದರು: ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಆರೋಪ

ತಮ್ಮ ವಿರುದ್ಧ ಅಕ್ರಮ ನಿಷೇಧ ಹೇರುವ ಮೂಲಕ 2014ರಲ್ಲಿ ಸೇನಾ ಮುಖ್ಯಸ್ಥರಾಗುವುದನ್ನು ತಡೆಯಲು ವಿದೇಶಾಂಗ...
ಭಾರತೀಯ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ದಲ್ಬೀರ್ ಸಿಂಗ್ ಸುಹಾಗ್.
ಭಾರತೀಯ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ದಲ್ಬೀರ್ ಸಿಂಗ್ ಸುಹಾಗ್.
ನವದೆಹಲಿ: ತಮ್ಮ ವಿರುದ್ಧ ಅಕ್ರಮ ನಿಷೇಧ ಹೇರುವ ಮೂಲಕ 2014ರಲ್ಲಿ ಸೇನಾ ಮುಖ್ಯಸ್ಥರಾಗುವುದನ್ನು ತಡೆಯಲು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ.ಸಿಂಗ್ ಪ್ರಯತ್ನಿಸಿದ್ದರು ಎಂದು ಭಾರತೀಯ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಆರೋಪಿಸುವ ಮೂಲಕ ಹೊಸ ವಿವಾದ ಸೃಷ್ಟಿಯಾಗಲು ದಾರಿ ಮಾಡಿಕೊಟ್ಟಿದೆ.
2012ರಲ್ಲಿ ತಮಗೆ ಕಳುಹಿಸಿದ ಶೋಕಾಸ್ ನೊಟೀಸ್ ನಲ್ಲಿ ತಮ್ಮ ವಿರುದ್ಧ ಕರ್ತವ್ಯಲೋಪದ ಕುರಿತು ವಿ.ಕೆ.ಸಿಂಗ್ ಸುಳ್ಳು, ಆಧಾರರಹಿತ ಮತ್ತು ಕಪೋಲಕಲ್ಪಿತ ಆರೋಪಗಳನ್ನು ಮಾಡಿದ್ದರು ಎಂದು ದಲ್ಬೀರ್ ಸಿಂಗ್ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅಫಿದವಿತ್ತಿನಲ್ಲಿ ಹೇಳಿದ್ದಾರೆ.
21012, ಮೇ 19ರಂದು ದಲ್ಬೀರ್ ಸಿಂಗ್ ವಿರುದ್ಧ ವಿ.ಕೆ.ಸಿಂಗ್ ಅವರು ಶಿಸ್ತು ಮತ್ತು ಜಾಗರೂಕತೆ ನಿಷೇಧ ಹೇರಿದ್ದನ್ನು ಅಫಿದವಿತ್ತಿನಲ್ಲಿ ಉಲ್ಲೇಖಿಸಲಾಗಿದೆ. ಆಗ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಬಿಕ್ರಮ್ ಸಿಂಗ್ ತಮ್ಮ ಮೊದಲಿನ ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ಅವರ ನಿರ್ಧಾರವನ್ನು ಅನೂರ್ಜಿತಗೊಳಿಸಿ ನಿಷೇಧ ತೆಗೆದುಹಾಕಿ ಅಂದಿನ ಲೆಫ್ಟಿನೆಂಟ್ ಜನರಲ್ ದಲ್ಬೀರ್ ಸಿಂಗ್ ಸುಹಗ್ ಅವರಿಗೆ ಬಡ್ತಿ ನೀಡಿ ಪೂರ್ವ ಸೇನಾ ಕಮಾಂಡರ್ ಆಗಿ ನೇಮಿಸಲು ಅನುವು ಮಾಡಿಕೊಟ್ಟರು ಎಂದು ಹೇಳಿದ್ದಾರೆ.
ದೇಶದ ಮೂರೂ ಸೇನೆಗಳ ಕಮಾಂಡರ್ ಸೇನಾ ಮುಖ್ಯಸ್ಥರಾಗಿ 2014ರಲ್ಲಿ ಅಧಿಕಾರ ವಹಿಸಬೇಕಿತ್ತು. ಆದರೆ ಅಂದಿನ ಸೇನಾ ಜನರಲ್ ವಿ.ಕೆ.ಸಿಂಗ್ ಅವರು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಗುಪ್ತಚರ ಹಾಗೂ ವಿಚಕ್ಷಣಾ ವ್ಯವಸ್ಥೆ ಘಟಕದಿಂದ ನಿಷೇಧಕ್ಕೊಳಗಾಗಿದ್ದರು. ಅಸ್ಸಾಂನಲ್ಲಿ ಅವರ ಕಮಾಂಡಿಂಗ್ ನಡಿ ನಡೆದ ಕಾರ್ಯಾಚರಣೆ ವಿಫಲವಾಗಿದ್ದರಿಂದ ಅವರಿಗೆ ಬಡ್ತಿ ನೀಡಲು ತಡೆಯೊಡ್ಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com