
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದ ಕರ್ನಾಹ್ ಪ್ರದೇಶದ ನಚಿನ್ ಗ್ರಾಮದಲ್ಲಿನ ಗಡಿ ಭದ್ರತಾ ಪಡೆ(ಬಿಎಸ್ಎಫ್) ಶಿಬಿರದ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು ಮೂವರು ಯೋಧರು ಗಾಯಗೊಂಡಿದ್ದಾರೆ.
ದಾಳಿಯಲ್ಲಿ ಗಾಯಗೊಂಡಿರುವ ಗಾಯಾಳು ಯೋಧರನ್ನು ಕೂಡಲೇ ಶ್ರೀನಗರದಲ್ಲಿನ ಸೇನಾ ನೆಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಯೋತ್ಪಾದಕರು ಹಾಗೂ ಯೋಧರ ನಡುವೆ ಗುಂಡಿನ ಘರ್ಷಣೆ ಮುಂದುವರೆದಿದ್ದು ಉಗ್ರ ನಿಗ್ರಹಕ್ಕಾಗಿ ಹೆಚ್ಚುವರಿ ಪಡೆಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Advertisement