ಭಾರತಕ್ಕೆ ಮೊದಲ ಪದಕ ತಂದ ಸಾಕ್ಷಿಗೆ ಏರ್ ಇಂಡಿಯಾದಿಂದ ಬಿಸಿನೆಸ್ ಕ್ಲಾಸ್ ಟಿಕೆಟ್ ಕೊಡುಗೆ
ನವದೆಹಲಿ: ರಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಸಾಕ್ಷಿ ಮಲಿಕ್ ಗೆ ಗೌರವ ಸೂಚಕವಾಗಿ ಏರ್ ಇಂಡಿಯಾಗಳ ಕೊಡುಗೆ ನೀಡಿದೆ.
ಸಾಕ್ಷಿ ಹಾಗೂ ಆಕೆಯ ಜೊತೆಗಾರರಿಗೆ ಏರ್ ಇಂಡಿಯಾ ಬಿಸಿನೆಸ್ ಕ್ಲಾಸ್ ಟಿಕೆಟ್ ಗಳನ್ನು ಕೊಡುಗೆ ನೀಡಿದೆ. ವಿಶೇಷವೆಂದರೆ ವಿಮಾನ ಪ್ರಯಾಣದ ಮೂಲಕ ಬೇರೆ ದೇಶಗಳಿಗೆ ತೆರಳುವ ಅವಕಾಶಕ್ಕಾಗಿಯೇ ತಾವು ಕ್ರೀಡೆಯನ್ನು ಆಯ್ಕೆ ಮಾಡಿದ್ದಾಗಿ ಸಾಕ್ಷಿ ಇತ್ತೀಚೆಗಷ್ಟೇ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಸಂಸ್ಥೆ ಸಾಕ್ಷಿ ಹಾಗೂ ಆಕೆಯ ಜೊತೆಗಾರರಿಗೆ ಬಿಸಿನೆಸ್ ಕ್ಲಾಸ್ ಟಿಕೆಟ್ ಗಳನ್ನು ಕೊಡುಗೆ ನೀಡಲಿದೆ ಎಂದು ಏರ್ ಇಂಡಿಯಾ ಮುಖ್ಯಸ್ಥ ಅಶ್ವಿನಿ ಲೊಹಾನಿ ತಿಳಿಸಿದ್ದಾರೆ.
ಈ ಬಗ್ಗೆ ಸಾಕ್ಷಿ ಮಲಿಕ್ ಗೆ ಪತ್ರ ಬರೆದಿರುವ ಲೊಹಾನಿ, ನಿಮ್ಮ ಸಾಧನೆ ಬಗ್ಗೆ ಏರ್ ಇಂಡಿಯಾ ಹೆಮ್ಮೆ ಪಟ್ಟಿದ್ದು, ಏರ್ ಇಂಡಿಯಾ ನೆಟ್ವರ್ಕ್ ಇರುವ ಯಾವುದೇ ಪ್ರದೇಶದಲ್ಲಿಯಾದರು ಸಂಚರಿಸಲು ಎರಡು ರಿಟರ್ನ್ ಬಿಸಿನೆಸ್ ಕ್ಲಾಸ್ ನ್ನು ನೀಡುತ್ತಿದ್ದು, ಒಂದು ವರ್ಷ ಅವಧಿಯ ಸಿಂಧುತ್ವ ಹೊಂದಿರಲಿದೆ ಎಂದು ತಿಳಿಸಿದ್ದಾರೆ. ಇನ್ನು ಹರ್ಯಾಣ ಸರ್ಕಾರದ ನಂತರ ಉತ್ತರ ಪ್ರದೇಶ ಸರ್ಕಾರ ಸಹ ಸಾಕ್ಷಿ ಮಲಿಕ್ ಗೆ ರಾಣಿ ಲಕ್ಷ್ಮೀಬಾಯಿ ಪ್ರಶಸ್ತಿಯ ಭಾಗವಾಗಿ 3.11 ಲಕ್ಷ ಬಹುಮಾನ ಘೋಷಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ