'ನಾಯಿ' ಎಂದು ಕರೆದರೂ ಪರವಾಗಿಲ್ಲ ಪಾಕಿಸ್ತಾನಿ ಎಂದು ಕರೆಯಬೇಡಿ: ಬಲೂಚ್ ನಿರಾಶ್ರಿತ

ಭಾರತಕ್ಕೆ ಆಗಮಿಸಿರುವ ಬಲೂಚಿಸ್ತಾನದ ನಿರಾಶ್ರಿತರೊಬ್ಬರು ನಮ್ಮನ್ನು ನಾಯಿ ಎಂದು ಕರೆದರೂ ಪರವಾಗಿಲ್ಲ ಆದರೆ ಪಾಕಿಸ್ತಾನಿ ಎಂದು ಮಾತ್ರ ಕರೆಯಬೇಡಿ...
ಮಜ್ದಾಕ್ ದಿಲ್ಶಾನ್ ಬಲೂಚ್
ಮಜ್ದಾಕ್ ದಿಲ್ಶಾನ್ ಬಲೂಚ್

ನವದೆಹಲಿ: ಭಾರತಕ್ಕೆ ಆಗಮಿಸಿರುವ ಬಲೂಚಿಸ್ತಾನದ ನಿರಾಶ್ರಿತರೊಬ್ಬರು ನಮ್ಮನ್ನು ನಾಯಿ ಎಂದು ಕರೆದರೂ ಪರವಾಗಿಲ್ಲ ಆದರೆ ಪಾಕಿಸ್ತಾನಿ ಎಂದು ಮಾತ್ರ ಕರೆಯಬೇಡಿ ಎಂದು ವಿಮಾನ ನಿಲ್ದಾಣ ಅಧಿಕಾರಿಗಳಿಗೆ ನೋವಿನಿಂದ ಹೇಳಿಕೊಂಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಭಾರತಕ್ಕೆ ಆಗಮಿಸಿದ್ದ ಬಲೂಚಿಸ್ತಾನದ ಮಜ್ದಾಕ್ ದಿಲ್ಶಾನ್ ಬಲೂಚ್ ಕೆನಡಾ ಪಾಸ್ ಪೋರ್ಟ್ ಹೊಂದಿದ್ದು ಪಾಕಿಸ್ತಾನದ ಕ್ವೆಟ್ವಾದಲ್ಲಿ ಜನಿಸಿದ್ದರು. ಪಾಕಿಸ್ತಾನದವರು ಎಂದು ವಿಮಾನದ ನಿಲ್ದಾಣದ ಅಧಿಕಾರಿಗಳು ಅವರನ್ನು ವಿಚಾರಣೆ ನಡೆಸಿದಾಗ ಈ ರೀತಿ ಹೇಳಿಕೆ ನೀಡಿದ್ದಾರೆ.

ಬಲೂಚಿಸ್ತಾನದ ಬಹುತೇಕ ನಿರಾಶ್ರಿತರು ಮತ್ತು ವಲಸಿಗರು ಪಾಕಿಸ್ತಾನದ ದಬ್ಬಾಳಿಕೆಯಿಂದ ಬೇಸತ್ತು ದೇಶ ತೊರೆಯುತ್ತಿದ್ದಾರೆ. ಪಾಕ್ ಆಕ್ರಮಿತ ಬಲೂಚ್ ಮತ್ತು ಪಿಓಕೆ ಪರ ಧ್ವನಿ ಎತ್ತಿರುವ ಪ್ರಧಾನಿ ಮೋದಿಯವರ ನೆರವು ಕೋರಿರುವ ಈ ಪ್ರದೇಶದ ಜನ ಪಾಕಿಸ್ತಾನ ಹಲವು ವರ್ಷದಿಂದ ನಡೆಸುತ್ತಿರುವ ದೌರ್ಜನ್ಯಕ್ಕೆ ಇತಿಶ್ರೀ ಹಾಡಲು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿವೆ.

ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಗಿಲ್ಗಿಟ್ ಮತ್ತು ಬಲೂಚಿಸ್ತಾನ ಜನತೆ ಅನುಭವಿಸುತ್ತಿರುವ ಯಾತನೆ ಮುಕ್ತಿಗೆ ನಮ್ಮ ಸಹಕಾರವಿದೆ ಎಂದು ಘೋಷಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com