ಮತ್ತೆ ಆರು ದಿನಗಳವರೆಗೆ ರದ್ದುಕೊಂಡಿದ್ದ ಪೋಸ್ಟ್ ಪೇಯ್ಡ್ ಮೊಬೈಲ್ ಫೋನ್ ಸೇವೆಗಳು ಕಾಶ್ಮೀರ ಕಣಿವೆಯಲ್ಲಿ ಮರುಪ್ರಾರಂಭವಾಗಿವೆ. 43 ದಿನಗಳಿಂದ ನಡೆಯುತ್ತಿರುವ ಹಿಂಸಾಚಾರ-ಘರ್ಷಣೆಯಲ್ಲಿ
ಶ್ರೀನಗರ: ಮತ್ತೆ ಆರು ದಿನಗಳವರೆಗೆ ರದ್ದುಕೊಂಡಿದ್ದ ಪೋಸ್ಟ್ ಪೇಯ್ಡ್ ಮೊಬೈಲ್ ಫೋನ್ ಸೇವೆಗಳು ಕಾಶ್ಮೀರ ಕಣಿವೆಯಲ್ಲಿ ಮರುಪ್ರಾರಂಭವಾಗಿವೆ. 43 ದಿನಗಳಿಂದ ನಡೆಯುತ್ತಿರುವ ಹಿಂಸಾಚಾರ-ಘರ್ಷಣೆಯಲ್ಲಿ 64 ಜನ ಮೃತಪಟ್ಟಿದ್ದು, ವದಂತಿಗಳು ಹರಡದಂತೆ ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿತ್ತು.
ಸುಮಾರು ಬೆಳಗ್ಗೆ 11 ಘಂಟೆಗೆ ಎಲ್ಲ ಮೊಬೈಲ್ ಫೋನ್ ಸೇವೆಗಳನ್ನು ಮರುಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಪ್ರೀ ಪೇಯ್ಡ್ ಮೊಬೈಲ್ ಫೋನುಗಳ ಹೊರಹೋಗುವ ದೂರವಾಣಿ ಕರೆಗಳನ್ನು ಇನ್ನೂ ತಡೆಹಿಡಿಯಲಾಗಿದೆ ಎಂದು ಅವರು ಹೇಳಿದ್ದಾರೆ.
ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರತ್ಯೇಕವಾದಿಗಳು ನಗರ ಕೇಂದ್ರದಲ್ಲಿ ರ್ಯಾಲಿ ನಡೆಸಬಹುದಾಗಿದ್ದನ್ನು ತಪ್ಪಿಸಲು ಭದ್ರತಾ ಕ್ರಮವಾಗಿ ಆಗಸ್ಟ್ 13 ರಿಂದ ಮೊಬೈಲ್ ಸೇವೆಗಳನ್ನು ರದ್ದುಮಾಡಲಾಗಿತ್ತು.
ಶ್ರೀನಗರ ಮತ್ತು ಕಣಿವೆಯ ಇತರ ಕೆಲವು ಭಾಗಗಳಲ್ಲಿ ಕರ್ಫ್ಯೂ ಮುಂದುವರೆದಿದೆ.