2 ವರ್ಷಗಳಲ್ಲಿ ಐಐಟಿ, ಐಐಎಂ ಕೋರ್ಸ್ ಗಳನ್ನು ಅರ್ಧಕ್ಕೇ ಮೊಟಕುಗೊಳಿಸಿರುವ 2 ಸಾವಿರ ವಿದ್ಯಾರ್ಥಿಗಳು!
2 ವರ್ಷಗಳಲ್ಲಿ ಐಐಟಿ, ಐಐಎಂ ಕೋರ್ಸ್ ಗಳನ್ನು ಅರ್ಧಕ್ಕೇ ಮೊಟಕುಗೊಳಿಸಿರುವ 2 ಸಾವಿರ ವಿದ್ಯಾರ್ಥಿಗಳು!

2 ವರ್ಷಗಳಲ್ಲಿ ಐಐಟಿ, ಐಐಎಂ ಕೋರ್ಸ್ ಗಳನ್ನು ಅರ್ಧಕ್ಕೇ ಮೊಟಕುಗೊಳಿಸಿರುವ 2 ಸಾವಿರ ವಿದ್ಯಾರ್ಥಿಗಳು!

ಇತ್ತೀಚಿನ ದಿನಗಳಲ್ಲಿ ಐಐಟಿ ಐಐಎಂ ಕೋರ್ಸ್ ಗಳನ್ನೂ ಅರ್ಧಕ್ಕೇ ಮೊಟಕುಗೊಳಿಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ.

ಮುಂಬೈ: ರಾಷ್ಟ್ರಮಟ್ಟದ ಪರೀಕ್ಷೆಗಳಲ್ಲಿ ತೇರ್ಗಡೆಗೊಂಡು ಐಐಟಿ ಹಾಗೂ ಐಐಎಂ ನಲ್ಲಿ ಸೇರುವುದು ಸವಾಲಿನ ಸಂಗತಿ. ಆದರೆ ಇತ್ತೀಚಿನ ದಿನಗಳಲ್ಲಿ ಐಐಟಿ ಐಐಎಂ ಕೋರ್ಸ್ ಗಳನ್ನೂ ಅರ್ಧಕ್ಕೇ ಮೊಟಕುಗೊಳಿಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ.

2014-16 ರ ಅವಧಿಯಲ್ಲಿ ಐಐಟಿ ಹಾಗೂ ಐಐಎಂ ನ ಒಟ್ಟು 2,000 ವಿದ್ಯಾರ್ಥಿಗಳು ಕೋರ್ಸ್ ಗಳನ್ನೂ ಅರ್ಧಕ್ಕೇ ನಿಲ್ಲಿಸಿದ್ದಾರೆ. ದೆಹಲಿ ಐಐಟಿಯಲ್ಲಿ ಅತಿ ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳು ಡ್ರಾಪ್ ಔಟ್ ಆಗಿದ್ದು, 2014-16 ರ ಅವಧಿಯಲ್ಲಿ ಒಟ್ಟು 699 ವಿದ್ಯಾರ್ಥಿಗಳು ಕೋರ್ಸ್ ಗಳನ್ನೂ ಅರ್ಧಕ್ಕೇ ಮೊಟಕುಗೊಳಿಸಿದ್ದಾರೆ.

ನಂತರದ ಸ್ಥಾನದಲ್ಲಿ ಐಐಟಿ ಖರಗ್ ಪುರ(544 ವಿದ್ಯಾರ್ಥಿಗಳು) ಐಐಟಿ ಬಾಂಬೆ(143 ವಿದ್ಯಾರ್ಥಿಗಳಿದ್ದಾರೆ). ಕೋರ್ಸ್ ಗಳನ್ನೂ ಅರ್ಧಕ್ಕೇ ಮೊಟಕುಗೊಳಿಸಿದವರು ಪಿ ಹೆಚ್ ಡಿ ಮಾಡುತ್ತಿದ್ದಾರೆ ಎಂದು ಐಐಟಿ ಬಾಂಬೆಯ ನಿರ್ದೇಶಕ ದೇವಾಂಗ್ ಖಾಖರ್ ಹೇಳಿದ್ದಾರೆ.

ಅಚ್ಚರಿಯ ಅಂಶವೆಂದರೆ ಐಐಎಂ ಕೋರ್ಸ್ ಗಳನ್ನು ಅರ್ಧಕ್ಕೆ ಮೊಟಕುಗೊಳಿಸುವ ವಿದ್ಯಾರ್ಥಿಗಳ ಸಂಖ್ಯೆ ಕಳೆದ ಕೆಲವು ವರ್ಷಗಳಿಂದ ಏರಿಕೆಯಾಗುತ್ತಿದ್ದು 2003-2005 ರಲ್ಲಿ 37 ಇದ್ದ ವಿದ್ಯಾರ್ಥಿಗಳಿದ್ದ ಸಂಖ್ಯೆ 2006-2008 ರಲ್ಲಿ 69 ಕ್ಕೆ ಏರಿಕೆಯಾಗಿದ್ದು, 2014-16 ರಲ್ಲಿ 104 ಕ್ಕೆ ಏರಿಕೆಯಾಗಿದ್ದು, ವಿದ್ಯಾರ್ಥಿಗಳ ಕಳಪೆ ಶೈಕ್ಷಣಿಕ ಪ್ರದರ್ಶನ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಐಐಎಂ ರಾಯ್ ಪುರದಲ್ಲಿ ಕಳೆದ ಎರಡು ವರ್ಷಗಳಲ್ಲಿ 20 ವಿದ್ಯಾರ್ಥಿಗಳು ಡ್ರಾಪ್ ಔಟ್ ಆಗಿದ್ದು ಇದೆ ಅತಿ ಹೆಚ್ಚಿನ ವಿದ್ಯಾರ್ಥಿಗಳು ಡ್ರಾಪ್ ಔಟ್ ಆಗಿರುವ ಐಐಎಂ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಗಳಿಗೆ ಅರ್ಧಕ್ಕೇ ಕೋರ್ಸ್ ಗಳನ್ನು ಬಿಟ್ಟು ತೆರಳದಂತೆ ಕೌನ್ಸಿಲಿಂಗ್ ನೀಡಲು ಪ್ರತ್ಯೇಕವಾದ ಬೋಧಕವರ್ಗ ಮಾರ್ಗದರ್ಶಕರಿದ್ದಾರೆ, ಆದರೂ ಸಹ ಅರ್ಧಕ್ಕೇ ಕೋರ್ಸ್ ಗಳನ್ನು ಮೊಟಕುಗೊಳಿಸುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ ಎಂದು ತಿಳಿದುಬಂದಿದೆ.

Related Stories

No stories found.

Advertisement

X
Kannada Prabha
www.kannadaprabha.com