ದಾರುಲ್‌ ಉಲೂಮ್‌
ದಾರುಲ್‌ ಉಲೂಮ್‌

ಗೋಮೂತ್ರದಿಂದ ತಯಾರಿಸಲಾಗಿರುವ ಉತ್ಪನ್ನಗಳಿಗೆ ಇಸ್ಲಾಮ್ ನಲ್ಲಿ ನಿಷೇಧ: ದಾರುಲ್‌ ಉಲೂಮ್‌

ಗೋಮೂತ್ರದಿಂದ ತಯಾರಿಸಲಾಗಿರುವ ಯಾವುದೇ ಉತ್ಪನ್ನಗಳನ್ನು ಇಸ್ಲಾಮ್ ನಲ್ಲಿ ನಿಷೇಧಿಸಲಾಗಿದೆ ಎಂದು ಇಸ್ಲಾಮಿಕ್‌ ಧಾರ್ಮಿಕ ಬೋಧನಾ ಕೇಂದ್ರ ದಾರುಲ್‌ ಉಲೂಮ್‌ ಆದೇಶ ಹೊರಡಿಸಿದೆ.

ಲಖನೌ: ಗೋಮೂತ್ರದಿಂದ ತಯಾರಿಸಲಾಗಿರುವ ಯಾವುದೇ ಉತ್ಪನ್ನಗಳನ್ನು ಇಸ್ಲಾಮ್ ನಲ್ಲಿ ನಿಷೇಧಿಸಲಾಗಿದೆ ಎಂದು ಇಸ್ಲಾಮಿಕ್‌ ಧಾರ್ಮಿಕ ಬೋಧನಾ ಕೇಂದ್ರ ದಾರುಲ್‌ ಉಲೂಮ್‌ ಆದೇಶ ಹೊರಡಿಸಿದೆ.

ಇಸ್ಲಾಮ್ ನ ಧಾರ್ಮಿಕ ಬೋಧನಾ ಕೇಂದ್ರದಲ್ಲಿ ಯೋಗ ಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆಯ ಉತ್ಪನ್ನಗಳ ಬಗ್ಗೆ ಪ್ರಶ್ನೆ ಯೊಂದಕ್ಕೆ ಉತ್ತರಿಸಿರುವ ದಾರುಲ್‌ ಉಲೂಮ್‌, ಗೋಮೂತ್ರದಿಂದ ತಯಾರಾಗಿರುವ ಯಾವುದೇ ಉತ್ಪನ್ನಗಳನ್ನು ಇಸ್ಲಾಮ್ ಗೆ ವಿರುದ್ಧವಾಗಿದೆ ಎಂದು ಹೇಳಿದೆ.  
ದಾರುಲ್ ಉಲೂಮ್ ನ ಇಫ್ತಾ ವಿಭಾಗದಲ್ಲಿ ಪತಂಜಲಿಯಿಂದ ತಯಾರಿಸಲಾಗಿರುವ ಉತ್ಪನ್ನಗಳ ಬಳಕೆ ಪಾವಿತ್ರ್ಯತೆ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಆಗಸ್ಟ್ 18 ರಂದು ಉತ್ತರ ನೀಡಿರುವ ಸಂಸ್ಥೆ, ಪತಂಜಲಿ ಸಂಸ್ಥೆಯ ಬೇರೆ ಉತ್ಪನ್ನಗಳನ್ನು ಬಳಕೆ ಮಾಡಬಹುದು. ಆದರೆ ಗೋಮೂತ್ರದಿಂದ ತಯಾರಿಸಲಾಗಿರುವ ಉತ್ಪನ್ನಗಳನ್ನು ಬಳಕೆ ಮಾಡುವುದಕ್ಕೆ ಇಸ್ಲಾಮ್ ನಲ್ಲಿ ವಿರೋಧವಿದೆ ಎಂದು ಹೇಳಿದೆ.

Related Stories

No stories found.

Advertisement

X
Kannada Prabha
www.kannadaprabha.com