ಈ ವೇಳೆ ಸದನವನ್ನು ಉದ್ದೇಶಿಸಿ ಮಾತನಾಡಿದ ಜಯಾ, ಪ್ರತಿಪಕ್ಷಗಳಿಗೆ ನಿಜಕ್ಕೂ ಜನರ ಬಗ್ಗೆ ಕಾಳಜಿ ಇದ್ದರೆ. ಸದನದಲ್ಲಿ ಹಾಜರಿದ್ದು, ಚರ್ಚೆಯಲ್ಲಿ ಭಾಗವಹಿಸಲಿ. ಓರ್ವ ಮಾಜಿ ಸಚಿವ ಸೇರಿದಂತೆ 10 ಡಿಎಂಕೆ ಸದಸ್ಯರ ಪೈಕಿ ಕನಿಷ್ಠ ಇಬ್ಬರಾದರೂ ಸದನದಲ್ಲಿ ಮಾತನಾಡಲಿ. ಈ ಹಿಂದೆ ನಮ್ಮ ಪಕ್ಷದ ಎಲ್ಲಾ ಶಾಸಕರನ್ನು ಅಮಾನತು ಮಾಡಿದಾಗ ನಾನು ಒಬ್ಬಳೇ ನಮ್ಮ ಪಕ್ಷವನ್ನು ಸದನದಲ್ಲಿ ಪ್ರತಿನಿಧಿಸಿದ್ದೇ ಎಂದು ನೆನಪಿಸಿಕೊಂಡರು. ಅಲ್ಲದೆ ಕರುಣಾನಿಧಿ ಅವರು ಏಕೆ ಚರ್ಚೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ಪ್ರಶ್ನಿಸಿದರು.