ಸ್ಕಾರ್ಪಿನ್ ಜಲಾಂತರ್ಗಾಮಿ ದಾಖಲೆ ಸೋರಿಕೆ: ಸರ್ಕಾರದಿಂದ ತನಿಖೆಗೆ ಆದೇಶ

ಭಾರತದಲ್ಲಿ ತಯಾರುಗೊಂಡ ಫ್ರಾನ್ಸ್ ನ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಗೆ ಉಂಟುಮಾಡಿರುವ ಹಾನಿಯ ಬಗ್ಗೆ ತನಿಖೆ ನಡೆಸಲು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಭಾರತದಲ್ಲಿ ತಯಾರುಗೊಂಡ ಫ್ರಾನ್ಸ್ ನ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಗೆ ಉಂಟುಮಾಡಿರುವ ಹಾನಿಯ ಬಗ್ಗೆ ತನಿಖೆ ನಡೆಸಲು ಸರ್ಕಾರ ಮುಂದಾಗಿದೆ. ನೌಕೆಗೆ ಸೇರಿದ ದಾಖಲೆಗಳು ಮತ್ತು ಯುದ್ಧ ಸಾಮರ್ಥ್ಯಗಳ ಬಗ್ಗೆ ಸೋರಿಕೆಯಾಗಿವೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ರಕ್ಷಣಾ ಸಚಿವಾಲಯ ಕ್ರಮಕ್ಕೆ ಮುಂದಾಗಿದೆ.
ದಾಖಲೆ, ಅಂಕಿಅಂಶಗಳು ಸೋರಿಕೆಯಾಗಿರುವ ಬಗ್ಗೆ ಮೊದಲು ಆಸ್ಟ್ರೇಲಿಯಾದ ಪತ್ರಿಕೆಯಲ್ಲಿ ವರದಿಯಾಗಿದ್ದು, ಭಾರತೀಯ ನೌಕಾಪಡೆಗೆ ಸೇರಿದ ಫ್ರಾನ್ಸ್ ಮೂಲದ ಡಿಸಿಎನ್ಎಸ್ ವಿನ್ಯಾಸಗೊಳಿಸಿದ ಆರು ಜಲಾಂತರ್ಗಾಮಿಗಳ ಸಾಮರ್ಥ್ಯಕ್ಕೆ ಸಂಬಂಧಪಟ್ಟ ರಹಸ್ಯ ದಾಖಲೆಗಳನ್ನೊಳಗೊಂಡ 22 ಸಾವಿರ ಪುಟಗಳ ದಾಖಲೆಗಳನ್ನು ಹೊಂದಿದೆ.
ಇಲ್ಲಿ ದಾಖಲೆಗಳ ಹ್ಯಾಕ್ ಆಗಿದೆ ಎಂದು ನಾನು ಅರ್ಥೈಸಿಕೊಂಡಿದ್ದೇನೆ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಮನೋಹರ್ ಪರ್ರಿಕರ್ ಏನು ನಡೆದಿದೆ ಎಂಬುದನ್ನು ನಾವು ಕಂಡುಹಿಡಿಯುತ್ತೇವೆ. ಸೋರಿಕೆ ವಿದೇಶಗಳಲ್ಲಿ ಆಗಿರಬೇಕೆ ಹೊರತು ಭಾರತದಲ್ಲಿ ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸ್ಕಾರ್ಪಿನೊ ಜಲಾಂತರ್ಗಾಮಿ ನೌಕೆಯನ್ನು ಮುಂಬೈಯ ನೌಕಾಂಗಣದಲ್ಲಿ ನಿರ್ಮಿಸಲಾಗಿದೆ. ಮೊದಲ ನೌಕೆ ಈ ವರ್ಷಾಂತ್ಯಕ್ಕೆ ಸೇವೆಗೆ ಸಿದ್ದವಾಗಬೇಕಿತ್ತು. ಈ ಸಾಮೂಹಿಕ ಸೋರಿಕೆ ಆಸ್ಟ್ರೇಲಿಯಾದಲ್ಲಿ ಡಿಸಿಎನ್ಎಸ್ ನ ಜಲಾಂತರ್ಗಾಮಿ ಯೋಜನೆಯ ಭದ್ರತೆ ಬಗ್ಗೆ ಸಂಶಯ ಎಬ್ಬಿಸಿದೆ. ಮುಂದಿನ ತಲೆಮಾರಿನ ಜಲಾಂತರ್ಗಾಮಿ ನಿರ್ಮಾಣಕ್ಕೆ ಡಿಸಿಎನ್ಎಸ್ ಆಸ್ಟ್ರೇಲಿಯಾದ ಡಾಲರ್ 50 ಶತಕೋಟಿ ರೂಪಾಯಿ ಗುತ್ತಿಗೆಯನ್ನು ಪಡೆದಿತ್ತು.
ಭಾರತದಲ್ಲಿ ಜಲಾಂತರ್ಗಾಮಿ ನೌಕೆಯ ದಾಖಲೆಗಳ ಸೋರಿಕೆಯಾಗಿದ್ದು ಆಸ್ಟ್ರೇಲಿಯಾದ ಜಲಾಂತರ್ಗಾಮಿ ನೌಕೆಯ ಕಾರ್ಯಕ್ರಮದ ಮೇಲೆ ಯಾವುದೇ ಪರಿಣಾಮ ಬೀರಲಾರದು. ಫ್ರಾನ್ಸ್ ರಾಯಭಾರ ವಕ್ತಾರರು ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಆಸ್ಟ್ರೇಲಿಯಾದ ಮಾಧ್ಯಮಗಳಲ್ಲಿ 2011ರಲ್ಲಿ ಫ್ರಾನ್ಸ್ ನಲ್ಲಿ ರಹಸ್ಯ ದಾಖಲೆಗಳು ಸೋರಿಕೆಯಾಗಿವೆ ಎಂದು ಹೇಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com