ಜಲಾಂತರ್ಗಾಮಿ ನೌಕೆ ದಾಖಲೆಗಳು ಸಂಪೂರ್ಣ ಸೋರಿಕೆಯಾಗಿರಲು ಸಾಧ್ಯವಿಲ್ಲ: ಮನೋಹರ್ ಪರ್ರಿಕರ್

ಭಾರತದ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಗೆ ಸಂಬಂಧಿಸಿದ ಸೂಕ್ಷ್ಮ ದಾಖಲೆಗಳು ಸೋರಿಕೆಯಾಗಿವೆ ಎಂಬ...
ರಕ್ಷಣಾ ಸಚಿವ ಮನೋಹರ್ ಪರ್ರಿಕರ್
ರಕ್ಷಣಾ ಸಚಿವ ಮನೋಹರ್ ಪರ್ರಿಕರ್
Updated on
ನವದೆಹಲಿ: ಭಾರತದ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಗೆ ಸಂಬಂಧಿಸಿದ ಸೂಕ್ಷ್ಮ ದಾಖಲೆಗಳು ಸೋರಿಕೆಯಾಗಿವೆ ಎಂಬ ವರದಿಗಳು ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ಅದಕ್ಕೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ಮನೋಹರ್ ಪರ್ರಿಕರ್, ನೌಕಾಪಡೆ ಮುಖ್ಯಸ್ಥರಿಗೆ ಬಹಿರಂಗಗೊಂಡಿರುವ ವರದಿಯನ್ನು ವಿಶ್ಲೇಷಿಸುವಂತೆ ಹೇಳಿದ್ದಾರೆ.
ಈ ವರದಿ ಬಹಿರಂಗಗೊಂಡ ವಿಷಯ ನನಗೆ ಮಧ್ಯರಾತ್ರಿ 12 ಗಂಟೆಗೆ ಹೊತ್ತಿಗೆ ತಿಳಿದುಬಂತು. ಇದೊಂದು ಹ್ಯಾಕಿಂಗ್ ಕೇಸು. ಏನು ಸೋರಿಕೆಯಾಗಿದೆ ಎಂದು ಸರಿಯಾಗಿ ತಿಳಿಸುವಂತೆ ನೌಕಾಪಡೆ ಮುಖ್ಯಸ್ಥರಿಗೆ ಹೇಳಿದ್ದೇನೆ ಎಂದು ಪರ್ರಿಕರ್ ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದರು.
ದಾಖಲೆಗಳ ಸಂಗ್ರಹವನ್ನು ಗುರುತಿಸಿ ಇನ್ನಷ್ಟೇ ಖಚಿತಪಡಿಸಬೇಕಿದೆ. ಜಲಾಂತರ್ಗಾಮಿಯ ದಾಖಲೆಗಳ ಸೋರಿಕೆ ಬಗ್ಗೆ ತಿಳಿದುಕೊಳ್ಳಬೇಕಿದೆ. ಆದರೂ ದಾಖಲೆಗಳು ಸಂಪೂರ್ಣ ಸೋರಿಕೆಯಾಗಿರಲು ಸಾಧ್ಯವಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com