ಕಾಶ್ಮೀರದ ದೀರ್ಘಾವಧಿಯ ಹೋರಾಟ ಇಸೀಸ್ ನೊಂದಿಗೆ ಸೇರುವ ಅಪಾಯವಿದೆ: ಪಿಡಿಪಿ ಸದಸ್ಯ

ಕಾಶ್ಮೀರದ ದೀರ್ಘಾವಧಿಯ ಹೋರಾಟ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಇಸೀಸ್ ಉಗ್ರ ಸಂಘಟನೆಯೊಂದಿಗೆ ಸೇರಿಕೊಳ್ಳುವ ಅಪಾಯವಿದೆ ಎಂದು ಸಂಸದ, ಜಮ್ಮು-ಕಾಶ್ಮೀರದ ಉಪಮುಖ್ಯಮಂತ್ರಿ ಮುಜಾಫರ್ ಹುಸೇನ್ ಬೇಗ್ ಎಚ್ಚರಿಕೆ ನೀಡಿದ್ದಾರೆ.
ಮುಜಾಫರ್ ಹುಸೇನ್ ಬೇಗ್
ಮುಜಾಫರ್ ಹುಸೇನ್ ಬೇಗ್

ನವದೆಹಲಿ: ಕಾಶ್ಮೀರದ ದೀರ್ಘಾವಧಿಯ ಹೋರಾಟ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಇಸೀಸ್ ಉಗ್ರ ಸಂಘಟನೆಯೊಂದಿಗೆ ಸೇರಿಕೊಳ್ಳುವ ಅಪಾಯವಿದೆ ಎಂದು ಸಂಸದ, ಜಮ್ಮು-ಕಾಶ್ಮೀರದ ಉಪಮುಖ್ಯಮಂತ್ರಿ ಮುಜಾಫರ್ ಹುಸೇನ್ ಬೇಗ್ ಎಚ್ಚರಿಕೆ ನೀಡಿದ್ದಾರೆ.
 
ಕಾಶ್ಮೀರದ ಹೋರಾಟ ಧಾರ್ಮಿಕ ತೀವ್ರವಾದದತ್ತ ಸೇರುವ ಅಪಾಯ ಎದುರಾಗಿದ್ದು, ಮುಸ್ಲಿಮರು ಹಿಂದೂಗಳೊಂದಿಗೆ ಜೀವಿಸಲು ಸಾಧ್ಯವಾಗುವುದಿಲ್ಲ ಎಂಬಂತಹ ರಾಜಕೀಯಕ್ಕಿಂತ ಭಿನ್ನ ಸ್ವರೂಪದ ಸಮಸ್ಯೆಯಾಗಲಿದೆ ಎಂದು ಮುಜಾಫರ್ ಹುಸೇನ್ ಬೇಗ್ ಅಭಿಪ್ರಾಯಪಟ್ಟಿದ್ದಾರೆ.
ಮೊಹಮ್ಮದ್ ಅಲಿ ಜಿನ್ನಾ ಮಾಡಿದ ಪ್ರತ್ಯೇಕ ರಾಷ್ಟ್ರದ ಕಲ್ಪನೆಯಿಂದ ಸಮಸ್ಯೆಗಳು ಮತ್ತಷ್ಟು ಜಟಿಲಗೊಂಡಿವೆ. 1990 ರಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನೆ ನಡೆದ ಪರಿಣಾಮ ಕಾಶ್ಮೀರಿ ಪಂಡಿತರ ನರಮೇಧ ನಡೆಸಲಾಯಿತು. ಇದು ಈಗಲೂ ಸ್ಥಳೀಯ ಹೋರಾಟದ ಭಾಗವಾಗಿದೆ ಎಂದು ಮುಜಾಫರ್ ಹುಸೇನ್ ಬೇಗ್ ಆತಂಕ ವ್ಯಕ್ತಪಡಿಸಿದ್ದಾರೆ. ವಿಶ್ವಾದ್ಯಂತ ಖಿಲಾಫತ್ ಚಳುವಳಿ ನಡೆದಾಗ ಕಾಶ್ಮೀರ ಅದರ ಭಾಗವಾಗಿರಲಿಲ್ಲ, ಆದರೆ ಈಗ ಕಾಶ್ಮೀರ ವಿಶ್ವಾದ್ಯಂತ ನಡೆಯುತ್ತಿರುವ ಧರ್ಮ ಯುದ್ಧದ ಭಾಗವಾಗುವ ಸಾಧ್ಯತೆ ಇದೆ ಎಂದು ಹುಸೇನ್ ಬೇಗ್ ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com