
ಮುಂಬೈ: ಮಹಿಳೆಯರು ಹಾಜಿ ಅಲಿ ದರ್ಗಾ ಪ್ರವೇಶಿಸಬಹುದು ಎಂದು ಬಾಂಬೆ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.
ಹಾಜಿ ಅಲಿ ದರ್ಗಾಕ್ಕೆ ಮಹಿಳೆಯರಿಗೆ ಪ್ರವೇಶ ನಿಷೇಧ ರದ್ದುಪಡಿಸಬೇಕು ಎಂದು ಆಗ್ರಹಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಮಹಿಳೆಯ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ತೀರ್ಪು ಪ್ರಕಟಿಸಿದೆ.
ಪವಿತ್ರ ಸಮಾಧಿ ಸ್ಥಳಕ್ಕೆ ಮಹಿಳೆಯರ ಪ್ರವೇಶಕ್ಕೆ ದರ್ಗಾ ಮಂಡಳಿ ನಿಷೇಧ ಹಾಕಿತ್ತು. ಇದನ್ನು ಪ್ರಶ್ನಿಸಿ ಸಾರ್ಜಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.
ಇನ್ನು ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರಿಂಕೋರ್ಟ್ ಗೆ ಅರ್ಜಿ ಸಲ್ಲಿಸುವುದಾಗಿ ದರ್ಗಾ ಮಂಡಳಿ ಹೇಳಿದೆ.
ಅಹ್ಮದ್ ನಗರದ ಶನಿ ಸಿಂಗಾಣಾಪುರ ದೇವಸ್ಥಾನ ಮತ್ತು ನಾಶಿಕ್ ನ ತ್ರ್ಯಂಬಕೇಶ್ವರ ದೇವಾಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ದೊರಕಿಸುವ ಯಶಸ್ವಿ ಆಂದೋಲನ ನಡೆಸಿದ್ದ ಭೂಮಾತಾ ಬ್ರಿಗೇಡ್ ನ ಅಧ್ಯಕ್ಷೆ ತೃಪ್ತಿ ದೇಸಾಯಿ ಹಾಜಿ ಅಲಿ ದರ್ಗಾ ಪ್ರವೇಶಕ್ಕೂ ಯತ್ನಿಸಿ ವಿಫಲರಾಗಿದ್ದರು. ಇದೀಗ ಮುಂಬೈ ಹೈಕೋರ್ಟ್ ನ ಈ ಐತಿಹಾಸಿಕ ತೀರ್ಪು ತೃಪ್ತಿ ದೇಸಾಯಿ ಹೋರಾಟಕ್ಕೆ ಸಿಕ್ಕ ಜಯವಾಗಿದೆ.
Advertisement