ಪೆಲೆಟ್ ಗನ್ ಗಳ ಬದಲು ಮೆಣಸಿನ ಶೆಲ್ ಬಳಕೆಗೆ ತಜ್ಞರ ಸಮಿತಿ ಶಿಫಾರಸು

ಕಾಶ್ಮೀರದಲ್ಲಿ ಪೆಲೆಟ್ ಗನ್ ಗಳ ಬದಲಿಗೆ ಮೆಣಸಿನ ಶೆಲ್ ಗಳನ್ನು ಬಳಕೆ ಮಾಡುವಂತೆ ಸರ್ಕಾರ ರಚಿಸಿದ್ದ ತಜ್ಞರ ಸಮಿತಿ ಸಲಹೆ ನೀಡಿದೆ.
ಪೆಲೆಟ್ ಗನ್
ಪೆಲೆಟ್ ಗನ್

ನವದೆಹಲಿ: ಕಾಶ್ಮೀರದಲ್ಲಿ ಪೆಲೆಟ್ ಗನ್ ಗಳ ಬದಲಿಗೆ ಮೆಣಸಿನ ಶೆಲ್ ಗಳನ್ನು ಬಳಕೆ ಮಾಡುವಂತೆ ಸರ್ಕಾರ ರಚಿಸಿದ್ದ ತಜ್ಞರ ಸಮಿತಿ ಸಲಹೆ ನೀಡಿದೆ.

ಕಣಿವೆ ರಾಜ್ಯ ಕಾಶ್ಮೀರದಲ್ಲಿ ಗಲಭೆಯನ್ನು ನಿಯಂತ್ರಿಸಲು ಈ ವರೆಗೂ ಪೆಲೆಟ್ ಗನ್ ಗಳನ್ನು ಬಳಕೆ ಮಾಡಲಾಗುತ್ತಿತ್ತು, ಆದರೆ ಪೆಲೆಟ್ ಗನ್ ಗಳಿಂದ ಅನೇಕ ಜನರ ಕಣ್ಣಿಗೆ ಹಾನಿಯಾಗಿರುವುದರಿಂದ, ತಜ್ಞರ ಸಮಿತಿ ಮೆಣಸಿನ ಶೆಲ್ ಗಳನ್ನು ಬಳಕೆ ಮಾಡುವಂತೆ ಸಲಹೆ ನೀಡಿದೆ.

ಪಾವಾ ಶೆಲ್( ಮೆಣಸಿನ ಶೆಲ್) ಬಳಕೆಯಿಂದ ತೀವ್ರ ಉರಿಯ ಅನುಭವವಷ್ಟೇ ಅಗಲಿದ್ದು ಪೆಲೆಟ್ ಗನ್ ಗಳಿಗೆ ಹೋಲಿಸಿದರೆ ಕನಿಷ್ಠ ಹಾನಿ ಉಂಟಾಗಲಿದೆ, ಈ ಹಿನ್ನೆಲೆಯಲ್ಲಿ ಪೆಲೆಟ್ ಗನ್ ಗಳ ಬದಲಿಗೆ ಮೆಣಸಿನ(ಪಾವಾ) ಶೆಲ್ ಗಳನ್ನು ಬಳಕೆ ಮಾಡಲು ತಜ್ಞರ ಸಮಿತಿ ಸಲಹೆ ನೀಡಿದೆ. ಹೊಸ ಪಾವಾ ಶೆಲ್ ಗಳ ಬಗ್ಗೆ ಸಮಿತಿ ವಾರದ ಹಿಂದೆಯಷ್ಟೇ ಪ್ರಾತ್ಯಕ್ಷಿಕೆ ನೀಡಿದ್ದು, ಭದ್ರತಾ ಪಡೆಗಳು ಇನ್ನು ಮೆಚ್ಚಿಕೊಂಡಿವೆ. ಅಲ್ಲದೆ ಗಲಭೆ ವೇಳೆ ಗುಂಪು ಚದುರಿಸಲು ಯೋಗ್ಯವಾಗಿದೆ ಎಂದು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com