ಹಿಂದೂ ಮಹಾಸಭಾ ನಾಯಕನ ಅರ್ಜಿಯನ್ನು 4 ವಾರಗಳಲ್ಲಿ ಇತ್ಯರ್ಥಗೊಳಿಸಲು ಅಲಹಾಬಾದ್ ಕೋರ್ಟ್ ಗೆ ಸೂಚನೆ

ತಮ್ಮ ವಿರುದ್ಧದ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದನ್ನು ಪ್ರಶ್ನಿಸಿ ಹಿಂದೂ ಮಹಾಸಭಾದ ನಾಯಕ ಕಮಲೇಶ್ ತಿವಾರಿ ಸಲ್ಲಿಸಿದ್ದ ಅರ್ಜಿಯನ್ನು ನಾಲ್ಕು ವಾರಗಳಲ್ಲಿ ಇತ್ಯರ್ಥಗೊಳಿ..
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ತಮ್ಮ ವಿರುದ್ಧದ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದನ್ನು ಪ್ರಶ್ನಿಸಿ ಹಿಂದೂ ಮಹಾಸಭಾದ ನಾಯಕ ಕಮಲೇಶ್ ತಿವಾರಿ ಸಲ್ಲಿಸಿದ್ದ ಅರ್ಜಿಯನ್ನು ನಾಲ್ಕು ವಾರಗಳಲ್ಲಿ ಇತ್ಯರ್ಥಗೊಳಿಸುವಂತೆ ಸುಪ್ರೀಂ ಕೋರ್ಟ್ ಅಲಹಾಬಾದ್ ಹೈಕೋರ್ಟ್ ಗೆ ಸೂಚನೆ ನೀಡಿದೆ.

ಪ್ರವಾದಿ ಮೊಹಮ್ಮದ್ ಅವರನ್ನು ಮೊದಲ ಸಲಿಂಗಕಾಮಿ ಎಂದು ಹೇಳಿದ್ದ ಹಿನ್ನೆಲೆಯಲ್ಲಿ ಹಿಂದೂ ಮಹಾಸಭಾದ ನಾಯಕ ಕಮಲೇಶ್ ತಿವಾರಿ ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಆರ್ ಎಸ್ ಎಸ್ ನಾಯಕರು ಸಲಿಂಗಕಾಮಿಗಳು, ಆದ್ದರಿಂದ ಅವರು ವಿವಾಹವಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೇ ಹಿಂದೂ ಮಹಾಸಭಾದ ನಾಯಕ ಕಮಲೇಶ್ ತಿವಾರಿ, ಪ್ರವಾದಿ ಮೊಹಮ್ಮದ್ ಮೊದಲ ಸಲಿಂಗಕಾಮಿ ಎಂದು ಹೇಳಿಕೆ ನೀಡಿದ್ದರು.

ಸೆಕ್ಷನ್ 377 ರ ವಿರುದ್ಧ ಮಾತನಾಡಿ, ಸಲಿಂಗಕಾಮದ ಬಗ್ಗೆ ನೀಡಲಾಗಿರುವ ತೀರ್ಪನ್ನು ಸುಪ್ರೀಂ ಕೋರ್ಟ್ ಮರುಪರಿಶೀಲನೆ ನಡೆಸಬೇಕು ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಸಚಿವ ಆಜಂ ಖಾನ್ ಆರ್ ಎಸ್ ಎಸ್ ನಾಯಕರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಆಜಂ ಖಾನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಪ್ರವಾದಿ ಮೊಹಮ್ಮದ್ ರನ್ನು ಮೊದಲ ಸಲಿಂಗಕಾಮಿ ಎಂದಿದ್ದ ಕಮಲೇಶ್ ತಿವಾರಿಯನ್ನು ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com