ಹೆರಿಗೆ ರಜೆ ಹೆಚ್ಚಳದಿಂದ ಆಗುವ ಹೆಚ್ಚುವರಿ ಖರ್ಚನ್ನು ಸರ್ಕಾರವೇ ಭರಿಸಬೇಕು: ಎಫ್ಐಎಸ್ಎಂಇ

ಪ್ರಸೂತಿ ರಜೆಯ ಅವಧಿಯನ್ನು ಹೆಚ್ಚಿಸುವುದರಿಂದ ಉಂಟಾಗುವ ಹೆಚ್ಚುವರಿ ಖರ್ಚುಗಳನ್ನು ಭರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಚಿಂತನೆ ನಡೆಸಿದೆ.
ಹೆರಿಗೆ ರಜೆ (ಸಾಂಕೇತಿಕ ಚಿತ್ರ)
ಹೆರಿಗೆ ರಜೆ (ಸಾಂಕೇತಿಕ ಚಿತ್ರ)

ನವದೆಹಲಿ: ಕೇಂದ್ರ ಸರ್ಕಾರ ಪ್ರಸೂತಿಯ ರಜೆಯ ಅವಧಿಯನ್ನು 12 ವಾರಗಳಿಂದ 26 ವಾರಗಳಿಗೆ ಹೆಚ್ಚಿಸುವ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಉದ್ಯೋಗಿಗಳ ವೆಚ್ಚ ಹೆಚ್ಚುವ ನಿರೀಕ್ಷೆ ಇದ್ದು, ಸಣ್ಣ ಹಾಗೂ ಮಾಧ್ಯಮ ಉದ್ದಿಮೆಗಳ ಒಕ್ಕೂಟ ಪ್ರಸೂತಿ ರಜೆಯ ಅವಧಿಯನ್ನು ಹೆಚ್ಚಿಸುವುದರಿಂದ ಉಂಟಾಗುವ ಹೆಚ್ಚುವರಿ ಖರ್ಚುಗಳನ್ನು ಭರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಚಿಂತನೆ ನಡೆಸಿದೆ.

ಸರ್ಕಾರ ರಾಜ್ಯಸಭೆಯಲ್ಲಿ ಮಂಡಿಸಿರುವ ಮಸೂದೆ ಲೋಕಸಭೆಯಲ್ಲೂ ಅಂಗೀಕಾರಗೊಂಡು ಕಾಯ್ದೆಯಾದರೆ, ಈಗ ನೀಡಲಾಗುತ್ತಿರುವ ಪ್ರಸೂತಿ ರಜೆ 12 ವಾರಗಳಿಂದ 26 ವಾರಗಳಿಗೆ ವಿಸ್ತರಣೆಯಾಗಲಿದೆ. ಅಲ್ಲದೆ ಕನಿಷ್ಠ 10 ಉದ್ಯೋಗಿಗಳನ್ನೊಳಗೊಂಡ ಸಂಸ್ಥೆಗಳಿಗೂ ಅನ್ವಯಿಸುತ್ತದೆ.

ವೇತನ ಸಹಿತವಾಗಿ ನೀಡಲಾಗುವ ಹೆರಿಗೆ ರಜೆ ಅವಧಿಯನ್ನು 12 ವಾರಗಳಿಂದ 26 ವಾರಗಳ ವರೆಗೆ ವಿಸ್ತರಿಸಿದರೆ ಸೀಮಿತ ಬಜೆಟ್ ನಲ್ಲಿ ಉದ್ದಿಮೆ ನಡೆಸುವ  ಸಣ್ಣ-ಮಾಧ್ಯಮ ಸಂಸ್ಥೆಗಳಿಗೆ ಹೊರೆಯಾಗಲಿದೆ ಈ ಹಿನ್ನೆಲೆಯಲ್ಲಿ ಕಾಯ್ದೆ ಜಾರಿಯಾದರೆ ಸಣ್ಣ ಉದ್ದಿಮೆಗಳು ಇನ್ನು ಮುಂದೆ ಮಹಿಳೆಯರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಹಿಂಜರಿಯುವ ಸಾಧ್ಯತೆ ಇದೆ ಎಂದು ಸಣ್ಣ ಹಾಗೂ ಮಾಧ್ಯಮ ಉದ್ದಿಮೆಗಳ ಒಕ್ಕೂಟ(ಎಫ್ಐಎಸ್ಎಂಇ) ಆತಂಕ ವ್ಯಕ್ತಪಡಿಸಿದೆ.

ಈ ಕಾರಣಗಳಿಂದ ಕೇಂದ್ರ ಸರ್ಕಾರ 12 ವಾರಗಳ ಹೆರಿಗೆ ರಜೆ ನಂತರ ಉಂಟಾಗುವ ಹೆಚ್ಚುವರಿ ವೆಚ್ಚವನ್ನು ಭರಿಸಬೇಕು ಎಂದು ಮನವಿ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಎಫ್ಐಎಸ್ಎಂಇ ಪ್ರಧಾನ ಕಾರ್ಯದರ್ಶಿ ಅನಿಲ್ ಭಾರದ್ವಾಜ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಮಂಡಿಸಿರುವ ಮಸೂದೆ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯಲ್ಲೂ ಮಂಡನೆಯಾಗಲಿದೆ. ಪ್ರಸೂತಿ ರಜೆಯ ಅವಧಿಯನ್ನು ಹೆಚ್ಚಿಸುವುದರಿಂದ ಸಂಘಟಿತ ಕ್ಷೇತ್ರದ 1.8 ಮಿಲಿಯನ್ ಮಹಿಳೆಯರಿಗೆ ಅನುಕೂಲವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com