ಆರ್ ಬಿಐ ಗವರ್ನರ್ ರಘುರಾಂ ರಾಜನ್ ಅರ್ಥಶಾಸ್ತ್ರದಲ್ಲಿ ಪದವಿಯನ್ನೇ ಪಡೆದಿಲ್ಲ: ಸ್ವಾಮಿ ಹೊಸ ಬಾಂಬ್

ರಘುರಾಂ ರಾಜನ್ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿಲ್ಲ. ಎಂಜಿನೀಯರಿಂಗ್ ನಂತರ ರಾಜನ್ ಮ್ಯಾನೇಜ್ ಮೆಂಟ್ ಕೋರ್ಸ್ ಮಾಡಿರುವ ಅವರಿಗೆ ಅರ್ಥಶಾಸ್ತ್ರದ
ರಘುರಾಂ ರಾಜನ್ ಮತ್ತು ಸುಬ್ರಮಣಿಯನ್ ಸ್ವಾಮಿ
ರಘುರಾಂ ರಾಜನ್ ಮತ್ತು ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ಆರ್ ಬಿಐ ಗವರ್ನರ್ ಹುದ್ದೆಯಿಂದ ನಿವೃತ್ತರಾಗುತ್ತಿರುವ ರಘುರಾಮ್ ರಾಜನ್ ಅವರ ವಿರುದ್ಧ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೊಸ ಆರೋಪ ಮಾಡಿದ್ದಾರೆ.

ಆರ್ ಬಿ ಐ ಗವರ್ನರ್ ಹುದ್ದೆಗೆ ನೂತನವಾಗಿ ನೇಮಕಗೊಂಡಿರುವ ಉರ್ಜಿತ್ ಪಟೇಲ್ ಅವರ ಬಗ್ಗೆ ಅಪಾರವಾದ ನಂಬಿಕೆ ಹೊಂದಿರುವುದಾಗಿ ತಿಳಿಸಿದರು. ಪಟೇಲ್ ರಾಜನ್ ಅವರ ಕೈ ಕೆಳಗೆ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

ಉರ್ಜಿತ್ ಪಟೇಲ್ 'ಯಾಳೆ' ವಿಶ್ವ ವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಆದರೆ ರಘುರಾಂ ರಾಜನ್ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿಲ್ಲ. ಎಂಜಿನೀಯರಿಂಗ್ ನಂತರ ರಾಜನ್ ಮ್ಯಾನೇಜ್ ಮೆಂಟ್ ಕೋರ್ಸ್ ಮಾಡಿರುವ ಅವರಿಗೆ ಅರ್ಥಶಾಸ್ತ್ರದ ಬಗ್ಗೆ ಸಾಮಾನ್ಯ ಜ್ಞಾನವೂ ಇಲ್ಲ ಎಂದು ಆರೋಪಿಸಿದ್ದಾರೆ. ಉರ್ಜಿತ್ ಪಟೇಲ್ ಹಲವು ವರ್ಷಳ ಕಾಲ ಆರ್ ಬಿಐ ಉಪಾಧ್ಯಕ್ಷರಾಗಿದ್ದವರು, ಅವರಿಗೆ ಅತ್ತಮ ಅನುಭವವಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com