ಎಐಎಡಿಎಂಕೆ ಸಂಸದೆ ಶಶಿಕಲಾ 6 ವಾರಗಳ ಕಾಲ ಬಂಧನದಿಂದ ಬಚಾವ್

ಮನೆ ಕೆಲಸದಾಕೆಯಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಎಐಎಡಿಎಂಕೆ ಸಂಸದೆ ಶಶಿಕಲಾ ಪುಷ್ಪ ಅವರನ್ನು ಆರು ವಾರಗಳ ಕಾಲ...
ಶಶಿಕಲಾ ಪುಷ್
ಶಶಿಕಲಾ ಪುಷ್

ನವದೆಹಲಿ: ಮನೆ ಕೆಲಸದಾಕೆಯಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಎಐಎಡಿಎಂಕೆ ಸಂಸದೆ ಶಶಿಕಲಾ ಪುಷ್ಪ ಅವರನ್ನು ಆರು ವಾರಗಳ ಕಾಲ ಬಂಧಿಸದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಪೊಲೀಸರಿಗೆ ಸೂಚಿಸಿದೆ.

ಬಂಧನದಿಂದ ರಕ್ಷಣೆ ಕೋರಿ ಎಐಎಡಿಎಂಕೆ ಉಚ್ಚಾಟಿತ ನಾಯಕಿ ಶಶಿಕಲಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಥಾಕೂರ್ ನೇತೃತ್ವದ ಸುಪ್ರೀಂ ಪೀಠ, ಆರು ವಾರಗಳ ಕಾಲ ಅನುಮತಿ ನೀಡಿದೆ. ಆದರೆ ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದೆ.

ಆರೋಪಿಯ ಪರ ವಾದ ಮಂಡಿಸಿದ ವಕೀಲ ಸಿದ್ದಾರ್ಥ್ ಲುತ್ರಾ ಅವರು, ಶಶಿಕಲಾ ಅವರು ರಾಜ್ಯಸಭಾ ಸದಸ್ಯೆಯಾಗಿದ್ದು, ಅವರು ಎಲ್ಲೂ ಓಡಿ ಹೋಗುವುದಿಲ್ಲ. ಹೀಗಾಗಿ ಅವರನ್ನು ಬಂಧಿಸದಂತೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.

 ಉಚ್ಚಾಟಿತ ಎಐಎಡಿಎಂಕೆ ನಾಯಕಿ ಶಶಿಕಲಾ ಪುಷ್ಪ ಹಾಗೂ ಅವರ ಪತಿ ಮತ್ತು ಪುತ್ರನ ವಿರುದ್ಧ ಪೊಲೀಸರು ಲೈಂಗಿಕ ಕಿರುಕುಳದ ಕೇಸ್ ದಾಖಲಿಸಿದ್ದಾರೆ.

2011ರಿಂದ 2014ರವರೆಗೆ ಶಶಿಕಲಾ ಅವರು ಟುಟಿಕೋರಿನ್ ಮೇಯರ್ ಆಗಿದ್ದ ವೇಳೆ ತಾನು ಮತ್ತು ತನ್ನ ಸಹೋದರಿ ಇಬ್ಬರೂ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದೇವು. ಈ ವೇಳೆ ನಮಗೆ ಗೃಹ ಬಂಧನ ವಿಧಿಸಲಾಗಿತ್ತು ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com