ಕಾನ್ಪುರ: 40 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಮೂವರು ಕಾಮುಕರು ಆಕೆಯ ಮುಖಕ್ಕೆ ಆ್ಯಸಿಡ್ ಹಾಕಿ ರಸ್ತೆಯಲ್ಲಿ ಬಿಸಾಡಿ ಹೋಗಿರುವ ದಾರುಣ ಘಟನೆ ಕಾನ್ಪುರದಲ್ಲಿ ನಡೆದಿದೆ.
ಮಹಿಳೆಯ ಒಂದು ಕಣ್ಣಿಗೆ ಹಾನಿಯಾಗಿದ್ದು, ಕುತ್ತಿಗೆ, ಮುಖದ ಮೇಲೆ ತೀವ್ರ ಗಾಯಗಳಾಗಿವೆ. ಆಕೆಯ ಗುರುತು ಯಾರಿಗೂ ಸಿಗಬಾರದೆಂಬ ಉದ್ದೇಶದಿಂದ ಆರೋಪಿಗಳು ಆಕೆಯ ಮೇಲೆ ಆಸಿಡ್ ದಾಳಿ ನಡೆಸಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ.
ಮುಖದ ಮೇಲಿನ ತೀವ್ರ ಗಾಯಗಳಿಂದಾಗಿ ಮಹಿಳೆಗೆ ಮಾತನಾಡಲು ಆಗುತ್ತಿಲ್ಲ ಎಂದು ಕಾನ್ಪುರ ಎಸ್ ಎಸ್ ಪಿ ಶಹಲಾಬ್ ತಿಳಿಸಿದ್ದಾರೆ. ತನ್ನ ಮೇಲೆ ಅತ್ಯಾಚಾರ ನಡೆಸಿದ ಮೂವರು ದುಶ್ಕರ್ಮಿಗಳು ಆಸಿಡ್ ಹಾಕಿ ರೈಲ್ವೆ ಹಳಿ ಪಕ್ಕದ ರಸ್ತೆಯಲ್ಲಿ ಬಿಸಾಡಿ ಹೋದರೆಂದು ಆಕೆ ತನ್ನ ಆಂಗಿಕ ಭಾಷೆಯಲ್ಲಿ ತಿಳಿಸಿದ್ದಾಳೆ.
ಮಹಿಳೆ ಮಾತನಾಡಿ ಪೂರ್ಣವಾಗ ವಿವರ ನೀಡಿದ ಮೇಲೆ ಮುಂದಿನ ತನಿಖೆ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
40 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಮೂವರು ಕಾಮುಕರು ಆಕೆಯ ಮುಖಕ್ಕೆ ಆ್ಯಸಿಡ್ ಹಾಕಿ ರಸ್ತೆಯಲ್ಲಿ ಬಿಸಾಡಿ ಹೋಗಿರುವ ದಾರುಣ ಘಟನೆ ಕಾನ್ಪುರದಲ್ಲಿ ನಡೆದಿದೆ.