ನವದೆಹಲಿ ಬಳಿ ಅಂತಾರಾಷ್ಟ್ರೀಯ ಮಟ್ಟದ ವಿವಿ ಪ್ರಾರಂಭಿಸಲಿರುವ ಬಾಬಾ ರಾಮ್ ದೇವ್

ಭಾರತದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾನಿಲಯವನ್ನು ಸ್ಥಾಪನೆ ಮಾಡಲು ಯೋಗ ಗುರು ರಾಮದೇವ್ ಚಿಂತನೆ ನಡೆಸಿದ್ದಾರಂತೆ.
ಬಾಬಾ ರಾಮ್ ದೇವ್
ಬಾಬಾ ರಾಮ್ ದೇವ್

ನವದೆಹಲಿ: ಭಾರತದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾನಿಲಯವನ್ನು ಸ್ಥಾಪನೆ ಮಾಡಲು ಯೋಗ ಗುರು ರಾಮದೇವ್ ಚಿಂತನೆ ನಡೆಸಿದ್ದಾರಂತೆ.

ವಿವಿಧ ಕ್ಷೇತ್ರಗಳಲ್ಲಿ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು ಬಾಬಾ ರಾಮ್ ದೇವ್ ಅವರ ಉದ್ದೇಶವಾಗಿದೆ. ಕೆಲವೊಂದು ವರದಿಗಳ ಪ್ರಕಾರ ವಿಶ್ವವಿದ್ಯಾನಿಲಯಕ್ಕಾಗಿ 1,500 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಹೌಸ್ಟನ್ ವಿಶ್ವವಿದ್ಯಾನಿಲಯದ ಮಾದರಿಯಲ್ಲಿ ನವದೆಹಲಿ ಬಳಿ ಸುಮಾರು 25,000 ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಲಾಗುತ್ತದೆ ಎಂದು ಬಾಬಾ ರಾಮ್ ದೇವ್ ತಿಳಿಸಿದ್ದಾರೆ. ಭಾರತದ ಪುರಾತನ  ನಳಂದಾ- ತಕ್ಷಶಿಲಾ ವಿಶ್ವವಿದ್ಯಾನಿಲಯಗಳಂತೆ ಬಾಬಾ ರಾಮ್ ದೇವ್ ಪ್ರಾರಂಭಿಸಲಿರುವ ವಿವಿಯನ್ನು ಪ್ರಸಿದ್ಧಪಡಿ ಪಡೆಯುವಂತೆ ಮಾಡಲಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನು ಗುರುಕುಲ ಮಾದರಿಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಬಾಬಾ ರಾಮ್ ದೇವ್, ರಾಷ್ಟ್ರ ಹಾಗು ರಾಜ್ಯ ಮಟ್ಟದಲ್ಲಿ ವೈದಿಕ ಶಿಕ್ಷಣ ನೀಡುವ ಶಿಕ್ಷಣ ಮಂಡಳಿಯನ್ನು ಸ್ಥಾಪನೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗು ಮಾನವ ಸಂಪನ್ಮೂಲ ಇಲಾಖೆಗೆ ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com