ಸ್ಕಾರ್ಪಿನ್ ನೌಕೆ ಸೋರಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತೇವೆ:ನೌಕಾ ಪಡೆ ಮುಖ್ಯಸ್ಥ ಸುನಿಲ್ ಲಂಬಾ

ಸೋರಿಕೆಯಾಗಿರುವ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಯ ರಹಸ್ಯ ಮಾಹಿತಿಗಳು ತುಂಬಾ ಗಂಭೀರವಾಗಿದ್ದರೂ ಕೂಡ ಗಾಬರಿಪಡುವಂಥ...
ಮುಂಬೈಯ ತೀರ ಸಮುದ್ರದಲ್ಲಿ ಮೇ1, 2016ರಂದು ಭಾರತದ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆ ಕಾಲಿವರಿ ತನ್ನ ಮೊದಲ ಪರೀಕ್ಷಾರ್ಥ ಸಂಚಾರ ನಡೆಸಿತು.
ಮುಂಬೈಯ ತೀರ ಸಮುದ್ರದಲ್ಲಿ ಮೇ1, 2016ರಂದು ಭಾರತದ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆ ಕಾಲಿವರಿ ತನ್ನ ಮೊದಲ ಪರೀಕ್ಷಾರ್ಥ ಸಂಚಾರ ನಡೆಸಿತು.
ನವದೆಹಲಿ: ಸೋರಿಕೆಯಾಗಿರುವ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಯ ರಹಸ್ಯ ಮಾಹಿತಿಗಳು ತುಂಬಾ ಗಂಭೀರವಾಗಿದ್ದರೂ ಕೂಡ ಗಾಬರಿಪಡುವಂಥ ವಿಷಯವಲ್ಲ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಂಬಾ ಹೇಳಿದ್ದಾರೆ. 
''ಯಾವುದೇ ಮಾಹಿತಿಗಳು ಸೋರಿಕೆಯಾದರೆ ಅದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಸ್ಕಾರ್ಪಿನ್ ದಾಖಲೆಗಳು ಸೋರಿಕೆಯಾಗಿರುವುದು ಗಂಭೀರವಾದ ವಿಷಯವಾಗಿದೆ. ಫ್ರಾನ್ಸ್ ನ ಸಂಸ್ಥೆ ಡಿಸಿಎನ್ಎಸ್ ಗೆ, ತಕ್ಷಣವೇ ತನಿಖೆ ನಡೆಸುವಂತೆ ಕೇಳಿದ್ದೇವೆ ಎಂದು ಹೇಳಿದರು. ನೌಕೆಗೆ ಸಂಬಂಧಿಸಿದ 22 ಸಾವಿರ ಪುಟಗಳ ದಾಖಲೆಗಳು ಸೋರಿಕೆಯಾಗಿವೆ ಎಂದು ವರದಿ ಬಂದ ಮೇಲೆ ನೌಕಾಪಡೆ ಮುಖ್ಯಸ್ಥರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ರಕ್ಷಣಾ ಸಚಿವಾಲಯ ರಚಿಸಿದ ಉನ್ನತ ಮಟ್ಟದ ಸಮಿತಿ ತನಿಖೆ ನಡೆಸಲಿದ್ದು, ಸಮಿತಿಯ ವರದಿಯಾಧರಿಸಿ ಉಪಶಮನ ಕ್ರಮಗಳನ್ನು ಏನು ತೆಗೆದುಕೊಳ್ಳಬಹುದು ಎಂದು ನೋಡುತ್ತೇವೆ ಎಂದರು.
ಸೋರಿಕೆಗೊಂಡಿರುವ ಮಾಹಿತಿಗಳು ಎಷ್ಟು ಗಂಭೀರವಾದದ್ದು ಎಂದು ಕೇಳಿದ್ದಕ್ಕೆ, ಇದು ತುಂಬಾ ಗಾಬರಿಪಡುವಂತಹ ವಿಷಯವಲ್ಲ. ಸಮಿತಿ ವಿಶ್ಲೇಷಣೆ ಮಾಡುತ್ತಿದ್ದು, ಯಾವ ದಾಖಲೆಗಳು ಸೋರಿಕೆಯಾಗಿವೆ ಮತ್ತು ಯಾವ ಕ್ರಮಗಳನ್ನು ಈ ನಿಟ್ಟಿನಲ್ಲಿ ತೆಗೆದುಕೊಳ್ಳಬಹುದು ಎಂದು ನೋಡಲಾಗುವುದು ಎಂದು ಹೇಳಿದರು.
ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ರಚಿಸಿರುವ ಉನ್ನತ ಮಟ್ಟದ ಸಮಿತಿ ತನ್ನ ವರದಿಯನ್ನು ಸೆಪ್ಟೆಂಬರ್ 20ರ ಹೊತ್ತಿಗೆ ನೀಡುವ ಅಂದಾಜಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com