ತುಪ್ಪ ತಿಂದರೆ ಚಾಂಪಿಯನ್ ಆಗೋದು ದನದ ಮಾಂಸ ತಿಂದರಲ್ಲಾ: ಬಾಬಾ ರಾಮ್‌ದೇವ್‌

ದನದ ಮಾಂಸ ತಿಂದಿದ್ದರಿಂದ ಒಲಿಂಪಿಕ್ಸ್ ನಲ್ಲಿ ಉಸೇನ್ ಬೋಲ್ಟ್ 9 ಚಿನ್ನದ ಪದಕಗಳನ್ನು ಗೆಲ್ಲಲು ಸಾಧ್ಯವಾಯಿತು ಎಂಬ ದೆಹಲಿ ಬಿಜೆಪಿ ಸಂಸದ ಉದೀತ್ ರಾಜ್...
ಯೋಗಗುರು ರಾಮ್ದೇವ್
ಯೋಗಗುರು ರಾಮ್ದೇವ್
ನವದೆಹಲಿ: ದನದ ಮಾಂಸ ತಿಂದಿದ್ದರಿಂದ ಒಲಿಂಪಿಕ್ಸ್ ನಲ್ಲಿ ಉಸೇನ್ ಬೋಲ್ಟ್ 9 ಚಿನ್ನದ ಪದಕಗಳನ್ನು ಗೆಲ್ಲಲು ಸಾಧ್ಯವಾಯಿತು ಎಂಬ ದೆಹಲಿ ಬಿಜೆಪಿ ಸಂಸದ ಉದೀತ್ ರಾಜ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಯೋಗಗುರು ಬಾಬಾ ರಾಮ್ ದೇವ್ ಗೋವಿನ ತುಪ್ಪ ತಿಂದರೆ ಚಾಂಪಿಯನ್ ಆಗೋದು ದನದ ಮಾಂಸ ತಿಂದರಲ್ಲಾ ಎಂದು ಹೇಳಿದ್ದಾರೆ. 
ಭಾರತೀಯ ಕ್ರೀಡಾಪಟುಗಳು ದನದ ಮಾಂಸ ತಿನ್ನಲ್ಲು ಯಾವುದೇ ತೊಂದರೆ ಇಲ್ಲ. ಆದರೆ ಒಲಿಂಪಿಕ್ಸ್ ನಲ್ಲಿ ನಮಗೆ ಚಿನ್ನದ ಪದಕಗಳು ಬೇಕಷ್ಟೇ ಎಂದು ಟ್ವೀಟ್ ಮಾಡುವ ಮೂಲಕ ವಿವಾದಕ್ಕೆ ಕಾರಣರಾಗಿದ್ದರು. 
ಆಗಸ್ಟ್ 28ರಂದು ಟ್ವೀಟ್ ಮಾಡಿದ್ದ ರಾಜ್ ಅವರು, ಬಡವನಾಗಿದ್ದ ಉಸೇನ್ ಬೋಲ್ಟ್ ಗೆ ಆತನ ಕೋಚ್ ದನದ ಮಾಂಸ ತಿನ್ನುವಂತೆ ಹೇಳಿದ್ದರು. ಅದನ್ನು ಅನುಸರಿಸಿದ್ದರಿಂದ ಬೋಲ್ಟ್ ಒಲಿಂಪಿಕ್ಸ್ ನಲ್ಲಿ 9 ಚಿನ್ನದ ಪದಕ ಗೆಲ್ಲಲು ಸಾಧ್ಯವಾಗಿತ್ತು ಎಂದು ಟ್ವೀಟಿಸಿದ್ದರು. 
ಭಾರತೀಯ ಕ್ರೀಡಾಪಟುಗಳು ಗೋಮಾಂಸ ಸೇವನೆ ಮಾಡಬಹುದು ಎಂಬ ಉದೀತ್ ರಾಜ್ ಅವರ  ಟ್ವೀಟ್ ಇತರ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. 
ಪತಾಂಜಲಿ ಹೆಸರಿನಲ್ಲಿ ಬಾಬಾ ರಾಮ್ ದೇವ್ ಅವರು ಶುದ್ಧ ಸಸ್ಯಹಾರಿ ಪದಾರ್ಥಗಳನ್ನು ತಯಾರಿಸಿ ಜಗತ್ತಿನಾದ್ಯಂತ ಮಾರಾಟ ಮಾಡುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com