ಮತ್ತೆ ಪ್ರಾರಂಭವಾಗಲಿದೆ ನ್ಯಾಷನಲ್ ಹೆರಾಲ್ಡ್; ನೀಲಭ್ ಮಿಶ್ರಾ ಮುಖ್ಯ ಸಂಪಾದಕ

8 ವರ್ಷಗಳ ನಂತರ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಾರಂಭವಾಗಲಿದ್ದು ನೀಲಭ್ ಮಿಶ್ರಾ ಪತ್ರಿಕೆಯ ಮುಖ್ಯ ಸಂಪಾದಕರಾಗಿರಲಿದ್ದಾರೆ.
ಅಸೋಸಿಯೇಟ್ ಜನರ್ಲ್ಸ್ ಲಿಮಿಟೆಡ್ ಸಂಸ್ಥೆ
ಅಸೋಸಿಯೇಟ್ ಜನರ್ಲ್ಸ್ ಲಿಮಿಟೆಡ್ ಸಂಸ್ಥೆ

ನವದೆಹಲಿ: 8 ವರ್ಷಗಳ ನಂತರ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಾರಂಭವಾಗಲಿದ್ದು ನೀಲಭ್ ಮಿಶ್ರಾ ಪತ್ರಿಕೆಯ ಮುಖ್ಯ ಸಂಪಾದಕರಾಗಿರಲಿದ್ದಾರೆ.

1937 ರಲ್ಲಿ ನೆಹರು ಸ್ಥಾಪಿಸಿದ್ದ ಕಾಂಗ್ರೆಸ್ ನ ಅಸೋಸಿಯೇಟ್ ಜನರ್ಲ್ಸ್ ಲಿಮಿಟೆಡ್ ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಪತ್ರಿಕಾ ಪ್ರಕಟಣೆಯನ್ನು ಪ್ರಾರಂಭಿಸುತ್ತಿದ್ದು, ನ್ಯಾಷನಲ್ ಹೆರಾಲ್ಡ್ ಹಾಗೂ ನವಜೀವನ್ ಪತ್ರಿಕೆಗಳು ಪ್ರಾರಂಭವಾಗಲಿವೆ ಎಂದು ಕಾಂಗ್ರೆಸ್ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಅಸೋಸಿಯೇಟ್ ಜನರ್ಲ್ಸ್ ಲಿಮಿಟೆಡ್ ಸಂಸ್ಥೆ ಹಿರಿಯ ಪತ್ರಕರ್ತ ನೀಲಭ್ ಮಿಶ್ರಾ ಅವರನ್ನು ಪತ್ರಿಕೆಯ ಸಂಪಾದಕರನ್ನಾಗಿ ನೇಮಕ ಮಾಡಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ. ಮಿಶ್ರಾ ಅವರು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಸಂಸ್ಥೆಯಿಂದ ಪ್ರಕಟವಾಗುವ ನ್ಯಾಷನಲ್ ಹೆರಾಲ್ಡ್, ನವಜೀವನ್ ಪತ್ರಿಕೆಗಳ ಪ್ರಧಾನ ಸಂಪಾದಕರಾಗಿರಲಿದ್ದಾರೆ. ಅಷ್ಟೇ ಅಲ್ಲದೇ, ಎರಡು ಪತ್ರಿಕೆಗಳ ಡಿಜಿಟಲ್ ಆವೃತ್ತಿಯ ಉಸ್ತುವಾರಿಯನ್ನು ಗಮನಿಸಲಿದ್ದು, ಕೆಲವೇ ತಿಂಗಳಲ್ಲಿ ಪತ್ರಿಕೆ ಪ್ರಕಟವಾಗಲಿದೆ ಎಂದು ಕಾಂಗ್ರೆಸ್ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com