10 ಕೋಟಿ ರೂ ಬಂಡವಾಳ ಹೂಡುವ ವಿದೇಶಿಗರಿಗೆ ಭಾರತೀಯ ನಿವಾಸಿಗಳ ಸ್ಥಾನಮಾನ ಪಡೆಯುವ ಅರ್ಹತೆ

ವಿದೇಶಿ ಬಂಡವಾಳ ಹುಡುಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಕೆಲವು ಹೊಸ ನೀತಿಗಳನ್ನು ಅಂಗೀಕರಿಸಿದೆ.
10 ಕೋಟಿ ರೂ ಬಂಡವಾಳ ಹೂಡುವ ವಿದೇಶಿಗರಿಗೆ ಭಾರತೀಯ ನಿವಾಸಿಗಳ ಸ್ಥಾನಮಾನ ಪಡೆಯುವ ಅರ್ಹತೆ
10 ಕೋಟಿ ರೂ ಬಂಡವಾಳ ಹೂಡುವ ವಿದೇಶಿಗರಿಗೆ ಭಾರತೀಯ ನಿವಾಸಿಗಳ ಸ್ಥಾನಮಾನ ಪಡೆಯುವ ಅರ್ಹತೆ

ನವದೆಹಲಿ: ವಿದೇಶಿ ಬಂಡವಾಳ ಹುಡುಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಕೆಲವು ಹೊಸ ನೀತಿಗಳನ್ನು ಅಂಗೀಕರಿಸಿದೆ.

ಕೇಂದ್ರ ಸಚಿವ ಸಂಪುಟ ಸಚಿವ ಸಭೆಯಲ್ಲಿ ಅಂಗೀಕರಿಸಲಾದ ಹೊಸ ನೀತಿಗಳ ಪ್ರಕಾರ, ವಿದೇಶಿಗರು 10 ಕೋಟಿ ರೂಪಾಯಿ ಬಂಡವಾಳ ತಂದರೆ ಅವರಿಗೆ ಭಾರತೀಯ ನಿವಾಸಿಗಳ ಸ್ಥಾನಮಾನ, ಸುಲಭವಾದ ವೀಸಾ ವ್ಯವಸ್ಥೆ ಹಾಗೂ ಅವರ ಕ್ಟುಂಬದವರಿಗೆ ಉದ್ಯೋಗ ನೀಡುವುದು ಪ್ರಧಾನ ಅಂಶವಾಗಿದೆ.

ಕೇಂದ್ರ ಸರ್ಕಾರದ ಈ ಹೊಸ ನೀತಿ ವಿದೇಶಿ ಬಂಡವಾಳವನ್ನು ಉತ್ತೇಜಿಸಲು ಹಾಗೂ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಸಹಕಾರಿಯಾಗಲಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿದೇಶಿ ಹೂಡಿಕೆದಾರರಿಗೆ ಭಾರತೀಯ ನಿವಾಸಿಗಳ ಸ್ಥಾನ ಮಾನ ನೀಡುವ ವಿಚಾರವಾಗಿ ವೀಸಾ ಕೈಪಿಡಿಯಲ್ಲಿ ಸೂಕ್ತ ನಿಬಂಧನೆಗಳನ್ನು ಸೇರಿಸಲಾಗುವುದು ಎಂದು ಅರುಣ್ ಜೇಟ್ಲಿ ಮಾಹಿತಿ ನೀಡಿದ್ದಾರೆ. 
10 ಕೋಟಿಗಿಂತ ಹೆಚ್ಚು ಹೂಡಿಕೆ ಮಾಡುವ ವಿದೇಶಿಗರಿಗೆ 10 ವರ್ಷಗಳ ಕಾಲ ಭಾರತೀಯ ನಿವಾಸಿಗಳ ಸ್ಥಾನಮಾನ ನೀಡಲಾಗುತ್ತದೆ. 10 ವರ್ಷಗಳ ಬಳಿಕ ಹೂಡಿಕೆದಾರರ ಬಗ್ಗೆ ಯಾವುದೇ ದೂರು ಇಲ್ಲದೆ ಇದ್ದಾರೆ ಮತ್ತೆ 10 ವರ್ಷಕ್ಕೆ ಭಾರತೀಯ ನಿವಾಸಿ ಸ್ಥಾನಮಾನವನ್ನು ವಿಸ್ತರಿಸಲಾಗುತ್ತದೆ. ಹೊಸ ನಿಯಮಗಳ ಪ್ರಕಾರ ಈ ಸೌಲಭ್ಯ ಸಿಗಬೇಕಾದರೆ ವಿದೇಶಿ ಬಂಡವಾಳ ಹೂಡಿಕೆದಾರರು 18 ತಿಂಗಳಲ್ಲಿ 10 ಕೋಟಿ ರೂಪಾಯಿ ಅಥವಾ 36 ತಿಂಗಳಲ್ಲಿ 25 ಕೋಟಿ ರೂಪಾಯಿ ಬಂಡವಾಳವನ್ನು ಹೂಡಬೇಕಾಗುತ್ತದೆ. ಅಷ್ಟೇ ಅಲ್ಲದೇ ವಿದೇಶಿಗರ ಬಂಡವಾಳ ಹೂಡಿಕೆ ಪ್ರತಿ ಆರ್ಥಿಕ ವರ್ಷದಲ್ಲೂ ಕನಿಷ್ಠ 20 ಭಾರತೀಯರಿಗೆ ನೌಕರಿಯನ್ನು ಸೃಷ್ಟಿ ಮಾಡಬೇಕಾಗುತ್ತದೆ. ವಿದೇಶಿಗರಿಗೆ ಭಾರತೀಯ ನಿವಾಸಿಗಳ ಸ್ಥಾನಮಾನ ನೀಡುವುದರಿಂದ, ಅವರಿಗೆ ಇಲ್ಲಿ ಆಸ್ತಿ ಖರೀದಿಸುವ ವಿದೇಶಿಗರ ಕುಟುಂಬ ಸದಸ್ಯರಿಗೆ ಖಾಸಗಿ ವಲಯದಲ್ಲಿ ನೌಕರಿ ಪಡೆಯುವ ಹಾಗೂ ವಿದ್ಯಾಭ್ಯಾಸ, ಅಧ್ಯಯನ ನಡೆಸುವ ಸೌಲಭ್ಯವೂ ದೊರೆಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com