ಜಿಎಸ್ ಟಿಗೆ 15 ರಾಜ್ಯಗಳ ಅನುಮೋದನೆ: ರಾಷ್ಟ್ರಪತಿಗಳ ಅಂಗೀಕಾರಕ್ಕೆ ಇನ್ನೊಂದೇ ಹಂತ ಬಾಕಿ

ಕೇಂದ್ರ ಸರ್ಕಾರ ಸಂಸತ್ ನಲ್ಲಿ ಅಂಗೀಕರಿಸಿರುವ ಸರಕು ಮತ್ತು ಸೇವಾ ತೆರಿಗೆ ಮಸೂದೆ (ಜಿಎಸ್ ಟಿ) ಗೆ 15 ರಾಜ್ಯಗಳು ಅನುಮೋದನೆ ನೀಡಿದ್ದು, ರಾಷ್ಟ್ರಪತಿಗಳಿಗೆ ಕಳಿಸಲು ಇನ್ನೊಂದೇ ಹಂತ ಬಾಕಿ ಇದೆ.
ಜಿಎಸ್ ಟಿ ಮಸೂದೆ
ಜಿಎಸ್ ಟಿ ಮಸೂದೆ

ನವದೆಹಲಿ: ಕೇಂದ್ರ ಸರ್ಕಾರ ಸಂಸತ್ ನಲ್ಲಿ ಅಂಗೀಕರಿಸಿರುವ ಸರಕು ಮತ್ತು ಸೇವಾ ತೆರಿಗೆ ಮಸೂದೆ (ಜಿಎಸ್ ಟಿ) ಗೆ 15 ರಾಜ್ಯಗಳು ಅನುಮೋದನೆ ನೀಡಿದ್ದು, ರಾಷ್ಟ್ರಪತಿಗಳಿಗೆ ಕಳಿಸಲು ಇನ್ನೊಂದೇ ಹಂತ  ಬಾಕಿ ಇದೆ.

ರಾಷ್ಟ್ರಪತಿಗಳ ಸಹಿಗಾಗಿ ಜಿಎಸ್ ಟಿ ಮಸೂದೆಯನ್ನು ಕಳಿಸಲು ಕನಿಷ್ಠ 16 ರಾಜ್ಯಗಳು ಮಸೂದೆಗೆ ಅನುಮೋದನೆ ನೀಡಬೇಕಾಗುತ್ತದೆ. ಮಸೂದೆಯನ್ನು ಅಂಗೀಕರಿಸಿರುವ 15 ರಾಜ್ಯ ಗೋವಾ ಆಗಿದ್ದು, ಕಳೆದ ವಾರ ಪಶ್ಚಿಮ ಬಂಗಾಳ ಸಹ ಜಿಎಸ್ ಟಿ ಮಸೂದೆಯನ್ನು ಅಂಗೀಕರಿಸಿದಿದ್ದರೆ  ಜಿಎಸ್ ಟಿ ಮಸೂದೆಯನ್ನು ರಾಷ್ಟ್ರಪತಿಗಳ ಸಹಿಗಾಗಿ ಕಲಿಸುವ ಅವಕಾಶ ಇತ್ತು. ಕೇಂದ್ರ ಸರ್ಕಾರ ಸಂಸತ್ ನಲ್ಲಿ ಮಸೂದೆ ಅಂಗೀಕರಿಸಿದ ನಂತರ ಜಿಎಸ್ ಟಿ ಮಸೂದೆಯನ್ನು ಅಂಗೀಕರಿಸಿದ ಮೊದಲ ರಾಜ್ಯ ಅಸ್ಸಾಂ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com