2 ಲಕ್ಷ ಕೋಟಿ ರುಪಾಯಿ ಕಪ್ಪುಹಣ ಘೋಷಿಸಿಕೊಂಡ ಒಂದೇ ಕುಟುಂಬ; ತನಿಖೆ

ಮುಂಬೈ ಕುಟುಂಬವೊಂದು ಆದಾಯ ಘೋಷಣಾ ಯೋಜನೆ(ಐಡಿಎಸ್)ಯಡಿಯಲ್ಲಿ 2 ಲಕ್ಷ ಕೋಟಿ ರುಪಾಯಿ ಮೌಲ್ಯದ ಕಪ್ಪುಹಣ...
ಕಪ್ಪುಹಣ
ಕಪ್ಪುಹಣ
ಮುಂಬೈ: ಮುಂಬೈ ಕುಟುಂಬವೊಂದು ಆದಾಯ ಘೋಷಣಾ ಯೋಜನೆ(ಐಡಿಎಸ್)ಯಡಿಯಲ್ಲಿ 2 ಲಕ್ಷ ಕೋಟಿ ರುಪಾಯಿ ಮೌಲ್ಯದ ಕಪ್ಪುಹಣ ಘೋಷಿಸಿಕೊಂಡಿದ್ದು ಆದಾಯ ತೆರಿಗೆ ಇಲಾಖೆಯು ತನಿಖೆಗೊಳಪಡಿಸುತ್ತಿದೆ. 
ಒಂದೇ ಕುಟುಂಬದ ಅಬ್ದುಲ್ ರಜಾಕ್ ಮೊಹಮ್ಮದ್ ಸಯ್ಯದ್, ಮೊಹಮ್ಮದ್ ಆರಿಫ್ ಅಬ್ದುಲ್ ರಜಾಕ್ ಸಯ್ಯದ್, ರುಕ್ಸಾನಾ ಅದ್ಬುಲ್ ರಜಾಕ್ ಸಯ್ಯದ್ ಹಾಗೂ ನೂರ್ ಜಹಾನ್ ಮೊಹಮ್ಮದ್ ಸಯ್ಯದ್ 2 ಲಕ್ಷ ಕೋಟಿ ರುಪಾಯಿ ಘೋಷಿಸಿಕೊಂಡಿದ್ದರು. ನಾಲ್ಕು ಪ್ಯಾನ್ ನಂಬರ್ ಗಳಲ್ಲಿ ಮೂರು ಅಜ್ಮೇರ್ ಮೂಲದ್ದಾಗಿದ್ದು ಸೆಪ್ಟೆಂಬರ್ 2015ರಲ್ಲಿ ಮುಂಬೈಗೆ ವರ್ಗವಾಗಿದೆ. 
ತನಿಖೆಯಲ್ಲಿ ಇವರೆಲ್ಲಾ ಬೇನಾಮಿ ಎಂದು ತಿಳಿದುಬಂದಿದ್ದು ಸಣ್ಣ ಪ್ರಮಾಣದ ಆದಾಯ ಮೂಲಗಳನ್ನು ಹೊಂದಿದ್ದಾರೆ. ಇವರೆಲ್ಲಾ ಆದಾಯ ಘೋಷಣೆ ಯೋಜನೆಯನ್ನು ದುರುಪಯೋಗಿಸಿಕೊಂಡಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದ್ದು ಎಲ್ಲವನ್ನು ತಡೆ ಹಿಡಿಯಲಾಗಿದೆ ಎಂದು ಆದಾಯ ತೆರಿಗೆ ಮೂಲಗಳು ತಿಳಿಸಿವೆ. 
ಸೆಪ್ಟೆಂಬರ್ 30ಕ್ಕೆ ಅಂತ್ಯಗೊಂಡ ಯೋಜನೆಯಡಿ 66,250 ಕೋಟಿ ರುಪಾಯಿ ಕಪ್ಪುಹಣ ಘೋಷಣೆಯಾಗಿತ್ತು. ಸೈಯದ್ ಕುಟುಂಬವು ಘೋಷಿಸಿದ ಕಪ್ಪುಹಣದ ಮೊತ್ತ ಇದರ ಮೂರು ಪಟ್ಟಿನಷ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com