ಹಿರೋಷಿಮಾ ಘಟನೆಗೆ ಒಬಾಮ ಕ್ಷಮೆ ಕೇಳಲಿಲ್ಲ, ಪರ್ಲ್ ಹಾರ್ಬರ್ ದಾಳಿಗೆ ಜಪಾನ್ ಪ್ರಧಾನಿಯೂ ಕೇಳುವುದಿಲ್ಲ

ಡಿ.26-27 ರಂದು ಜಪಾನ್ ಪ್ರಧಾನಿ ಶಿಂಜೋ ಅಬೆ ಪರ್ಲ್ ಹಾರ್ಬರ್ ಗೆ ಭೇಟಿ ನೀಡುತ್ತಿದ್ದು ಅಲ್ಲಿಗೆ ಭೇಟಿ ನೀಡಿದ ಮೊದಲ ಜಪಾನ್ ಪ್ರಧಾನಿಯಾಗಲಿದ್ದಾರೆ.
ಜಪಾನ್ ಪ್ರಧಾನಿ ಶಿಂಜೋ ಅಬೆ
ಜಪಾನ್ ಪ್ರಧಾನಿ ಶಿಂಜೋ ಅಬೆ
ಟೋಕಿಯೋ: ಡಿ.26-27 ರಂದು ಜಪಾನ್ ಪ್ರಧಾನಿ ಶಿಂಜೋ ಅಬೆ ಪರ್ಲ್ ಹಾರ್ಬರ್ ಗೆ ಭೇಟಿ ನೀಡುತ್ತಿದ್ದು ಅಲ್ಲಿಗೆ ಭೇಟಿ ನೀಡಿದ ಮೊದಲ ಜಪಾನ್ ಪ್ರಧಾನಿಯಾಗಲಿದ್ದಾರೆ. 
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರೊಂದಿಗೆ ಮಾತುಕತೆ ನಡೆಸುವುದಕ್ಕಾಗಿ ಹವಾಯಿ ದ್ವೀಪಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಪರ್ಲ್ ಹಾರ್ಬರ್ ಗೆ ಭೇಟಿ ನೀಡಿ ಹುತಾತ್ಮ ಯೋಧರ ಸ್ಮಾರಕಗಳಿಗೆ ಗೌರವ ಸಲ್ಲಿಸಲಿದ್ದಾರೆ.  ಆದರೆ 1941 ರ ಡಿ.7 ರಂದು ಜಪಾನ್ ಅಮೆರಿಕ ನೌಕಾ ಪಡೆ ಮೇಲೆ ನಡೆಸಿದ ದಾಳಿಗೆ ಕ್ಷಮೆ ಕೋರುವುದಿಲ್ಲ ಎಂದು ತಿಳಿದುಬಂದಿದೆ. 
ಇದಕ್ಕೂ ಮುನ್ನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಜಪಾನ್ ನ ಹಿರೋಷಿಮಾ ನಗರಕ್ಕೆ ಭೇಟಿ ನೀಡಿದ್ದರು. ಆದರೆ ಅಮೆರಿಕ ಹಿರೋಷಿಮಾ ನಾಗಸಾಕಿ ನಗರಗಳ ಮೇಲೆ ನಡೆಸಿದ್ದ ಅಣುದಾಳಿಗೆ ಕ್ಷಮೆ ಕೋರಲು ನಿರಾಕರಿಸಿದ್ದರು. ಈಗ ಪರ್ಲ್ ಹಾರ್ಬರ್ ಗೆ ಭೇಟಿ ನೀಡುತ್ತಿರುವ ಜಪಾನ್ ನ ಪ್ರಧಾನಿಯೂ ಸಹ ಕ್ಷಮೆ ಕೋರಲು ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com