ನೋಟು ನಿಷೇಧದ ಯಜ್ಞದಲ್ಲಿ ಭಾಗಿಯಾದ ಭಾರತೀಯರಿಗೆ ವಂದನೆ: ಪ್ರಧಾನಿ ಮೋದಿ

ಡಿ.8 ಕ್ಕೆ 500, 1000 ರೂ ನೋಟುಗಳ ನಿಷೇಧವಾಗಿ ಒಂದು ತಿಂಗಳು ಕಳೆದಿದ್ದು, ಪ್ರಧಾನಿ ನರೇಂದ್ರ ಮೋದಿ ನೋಟು ನಿಷೇಧದ ಕಾರ್ಯಾಚರಣೆಯನ್ನು ಕಪ್ಪುಹಣ, ಭಯೋತ್ಪಾದನೆಯ ವಿರುದ್ಧದ ಯಜ್ಞದಲ್ಲಿ ಭಾಗಿಯಾಗಿದ್ದಕ್ಕೆ ದೇಶದ ಜನತೆಗೆ ನಮಸ್ಕರಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ
ನವದೆಹಲಿ: ಡಿ.8 ಕ್ಕೆ 500, 1000 ರೂ ನೋಟುಗಳ ನಿಷೇಧವಾಗಿ ಒಂದು ತಿಂಗಳು ಕಳೆದಿದ್ದು, ಪ್ರಧಾನಿ ನರೇಂದ್ರ ಮೋದಿ ನೋಟು ನಿಷೇಧದ ಕಾರ್ಯಾಚರಣೆಯನ್ನು ಕಪ್ಪುಹಣ, ಭಯೋತ್ಪಾದನೆಯ ವಿರುದ್ಧದ ಯಜ್ಞದಲ್ಲಿ ಭಾಗಿಯಾಗಿದ್ದಕ್ಕೆ  ದೇಶದ ಜನತೆಗೆ ನಮಸ್ಕರಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. 
ಪ್ರತಿಪಕ್ಷಗಳು ನೋಟು ನಿಷೇಧದ ವಿರುದ್ಧ ಪ್ರತಿಭಟನೆಯನ್ನು ಮುಂದುವರೆಸಿದ್ದು, ಡಿ.8 ನ್ನು ಕರಾಳ ದಿನವನ್ನಾಗಿ ಆಚರಿಸಿದ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ನೋಟು ನಿಷೇಧದ ವಿಚಾರದಲ್ಲಿ ಸರ್ಕಾರಕ್ಕೆ ದೇಶದ ಜನತೆಯ ಬೆಂಬಲವಿದೆ ಎಂದು ಹೇಳಿದ್ದರು. ನಂತರ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ನೋಟು ನಿಷೇಧದ ಕಾರ್ಯಾಚರಣೆಯನ್ನು ಭಯೋತ್ಪಾದನೆಯ ವಿರುದ್ಧದ ಯಜ್ಞ ಎಂದು ಹೇಳಿದ್ದು, ದೇಶದ ಜನತೆ ಯಜ್ಞದಲ್ಲಿ ಭಾಗವಹಿಸಿದ್ದಾರೆ. ಅವರಿಗೆ ವಂದಿಸುತ್ತೇನೆ, ಇನ್ನು ಮುಂದೆ ಕಪ್ಪುಹಣದ ಕಾರಣದಿಂದಾಗಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಕುಂಠಿತವಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ. 
ಕೇಂದ್ರ ಸರ್ಕಾರದ ನಿರ್ಧಾರ ಕೃಷಿಕರು, ವ್ಯಾಪಾರಿಗಳು ಸೇರಿದಂತೆ ದೇಶದ ಅರ್ಥವ್ಯವಸ್ಥೆಯ ಬೆನ್ನೆಲುಬಾದವರಿಗೆ ಹಲವು ರೀತಿಯಲ್ಲಿ ಉಪಯುಕ್ತವಾಗಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com