ಜಯಲಲಿತಾ ಸಾವು: ಪ್ರಧಾನಿಗೆ ಗೌತಮಿ ಬರೆದ ಪತ್ರಕ್ಕೆ ನಟ ಶರತ್ ಕುಮಾರ್ ತಿರುಗೇಟು

ತಮಿಳು ನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ನೀಡದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತನಿಖೆಗೆ ಆಗ್ರಹಿಸಬೇಕು ಎಂದು ನಟಿ ...
ನಟ ಶರತ್ ಕುಮಾರ್
ನಟ ಶರತ್ ಕುಮಾರ್

ಚೆನ್ನೈ: ತಮಿಳು ನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ನೀಡದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತನಿಖೆಗೆ ಆಗ್ರಹಿಸಬೇಕು ಎಂದು ನಟಿ ಗೌತಮಿ ತಮ್ಮ ಬ್ಲಾಗ್ ನಲ್ಲಿ ಬರೆದಿದ್ದ ಪತ್ರಕ್ಕೆ ನಟ ಹಾಗೂ ರಾಜಕಾರಣಿ ಶರತ್ ಕುಮಾರ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಎಐಎಡಿಎಂಕೆ ಅಧ್ಯಕ್ಷೆ ಜಯಲಲಿತಾ ಅವರ ಸಾವಿನ ಬಗ್ಗೆ ತನಿಖೆ ನಡೆಸಬೇಕು ಎಂದು ಬರೆದಿರುವುದಕ್ಕೆ ಶರತ್ ಕುಮಾರ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಡಿಯರ್ ಮೋದಿಜಿ,

ಜನ ಸಾಮಾನ್ಯರು ಎಂದು ಕರೆದುಕೊಳ್ಳುವ ಕೆಲವು ಜನರು ಆದಾರ ರಹಿತ ಆರೋಪ ಮಾಡುತ್ತಾರೆ. ಇಡೀ ಮೆಡಿಕಲ್ ವ್ಯವಸ್ಥೆ ಬಗ್ಗೆ ಅನಮಾನ ವ್ಯಕ್ತ ಪಡಿಸುತ್ತಿದ್ದಾರೆ. ಜಯಲಲಿತಾ ಆರೋಗ್ಯದ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಗಮನ ಕೇಂದ್ರಿಕರಿಸಿದ್ದವು. ಆದರೆ ಜಯ ಸಾವಿನ ನಂತರ ಹೀಗೆಲ್ಲಾ ಆರೋಪ ಮಾಡುತ್ತಿರುವುದು ಎಲ್ಲರಿಗೂ ಆಘಾತ ತಂದಿದೆ.

ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಬಗ್ಗೆ ಎಲ್ಲರ ಗಮನ ಕೇಂದ್ರೀಕರಿಸಬೇಕೆಂಬ ದೃಷ್ಠಿಯಿಂದ ಕೆಲವರು ಇಂಥ ಕುತಂತ್ರಗಳನ್ನು ಬಳಕೆ ಮಾಡುತ್ತಾರೆ. ನಾನು ಒಬ್ಬ ಸಾಮಾನ್ಯ ವ್ಯಕ್ತಿಯಾಗಿ, ತನಿಖೆ ನಡೆಸಬೇಕು ಎಂದು ಹೇಳಿದವರಲ್ಲಿ ಒಂದು ಪ್ರಶ್ನೆ ಕೇಳುತ್ತೇನೆ.

ಜಯಲಲಿತಾ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ರಾಜ್ಯ ಪಾಲ ವಿದ್ಯಾಶಂಕರ್ ರಾವ್ ಹಾಗೂ ಕೇಂದ್ರದ ಕೆಲ ಪ್ರತಿನಿಧಿಗಳು ಆಸ್ಪತ್ರೆಗೆ ಭೇಟಿ ನೀಡಿ ಜಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದರು.ಅವರು ಸಹ ಸತ್ಯವನ್ನು ಮುಚ್ಚಿಟ್ಟಿದ್ದರೇ? ಹಾಗಿದ್ದಾರೆ ರಾಜ್ಯಪಾಲರು ಜಯ ಆರೋಗ್ಯದ ಬಗ್ಗೆ ಸುಳ್ಳು ಹೇಳಿದ್ದರು ಎಂದು ನಾವು ಭಾವಿಸಲಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ಇನ್ನೂ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಎಐಎಡಿಎಂಕೆ ವಕ್ತಾರೆ ಸಿಆರ್ ಸರಸ್ವತಿ, ರಾಜ್ಯಪಾಲ ವಿದ್ಯಾ ಶಂಕರ್ ರಾವ್ ಹಾಗೂ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಜಯಲಲಿತಾ ಅವರನ್ನು ಭೇಟಿ ಮಾಡಿ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರಲ್ಲಿ ಮುಚ್ಚುಮರೆ ಮಾಡುವಂತಹದ್ದು ಏನು ಇಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com