ನಗದು ಬಿಕ್ಕಟ್ಟು: ದೆಹಲಿ ಮೆಟ್ರೊ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಿತಿ 2000ಕ್ಕೆ ಹೆಚ್ಚಳ

ನಗದು ಬಿಕ್ಕಟ್ಟು ಹಾಗೂ ಚಿಲ್ಲರೆ ಸಮಸ್ಯೆಯ ಹಿನ್ನೆಲೆಯಲ್ಲಿ ದೆಹಲಿ ಮೊಟ್ರೊ ತಾತ್ಕಾಲಿಕವಾಗಿ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಿತಿಯನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ನಗದು ಬಿಕ್ಕಟ್ಟು ಹಾಗೂ ಚಿಲ್ಲರೆ ಸಮಸ್ಯೆಯ ಹಿನ್ನೆಲೆಯಲ್ಲಿ ದೆಹಲಿ ಮೊಟ್ರೊ ತಾತ್ಕಾಲಿಕವಾಗಿ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಿತಿಯನ್ನು 1000 ದಿಂದ 2000 ರುಪಾಯಿಗೆ ಹೆಚ್ಚಳ ಮಾಡಿ ಶನಿವಾರ ಆದೇಶ ಹೊರಡಿಸಿದೆ.
ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಿತಿಯನ್ನು ಕೇವಲ ಡಿಸೆಂಬರ್ 31ರವರೆಗೆ ಮಾತ್ರ ಹೆಚ್ಚಿಸಲಾಗಿದೆ ಎಂದು ಡಿಎಂಆರ್ ಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಸ್ತೂತ 1 ಸಾವಿರ ರುಪಾಯಿ ವರೆಗೆ ಮಾತ್ರ ರಿಚಾರ್ಜ್ ಮಾಡಲು ಅವಕಾಶವಿದೆ. ಆದರೆ ಹೊಸ 500 ರುಪಾಯಿ ಮುಖಬೆಲೆಯ ನೋಟ್ ಗಳ ಕೊರತೆಯ ಹಿನ್ನೆಲೆಯಲ್ಲಿ ಮೆಟ್ರೊ ಸಿಬ್ಬಂದಿ 2000 ರುಪಾಯಿಗೆ ಚಿಲ್ಲರೆ ನೀಡಲು ಪರದಾಡುತ್ತಿದ್ದಾರೆ. ರಿಚಾರ್ಜ್ ಮಿತಿ ಹೆಚ್ಚಳದಿಂದ ಮೆಟ್ರೊ ಸಿಬ್ಬಂದಿ ಹಾಗೂ ಗ್ರಾಹಕ ಇಬ್ಬರಿಗೂ ಸಹಕಾರಿಯಾಗಲಿದೆ ಎಂದು ಮೆಟ್ರೊ ವಕ್ತಾರರು ತಿಳಿಸಿದ್ದಾರೆ.
ದೆಹಲಿಯಲ್ಲಿ ಸುಮಾರು 27-30 ಲಕ್ಷ ಜನ ಮೊಟ್ರೊ ಸ್ಮಾರ್ಟ್ ಕಾರ್ಡ್ ಹೊಂದಿದ್ದು, ನಿತ್ಯ ಸುಮಾರು ಎರಡು ಲಕ್ಷ ಜನ ಟಾಪ್ ಅಪ್ ಮಾಡಿಸುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com