
ಮುಂಬಯಿ: ಪ್ರಪಂಚದಲ್ಲೇ ಅತಿ ತೂಕದ ಮಹಿಳೆ ಎಂದು ಗುರುತಿಸಿಕೊಂಡಿರುವ ಈಜಿಪ್ಟ್ ನ 500 ಕೆಜಿ ಮಹಿಳೆಯನ್ನು ಮುಂಬೈಗೆ ಶಸ್ತ್ರಚಿಕಿತ್ಸೆಗಾಗಿ ವಿಶೇಷ ವಿಮಾನದಲ್ಲಿ ಕರೆತರಲು ಬೇಕಾಗುವ ವೆಚ್ಚ ಬರೋಬ್ಬರಿ 20 ಲಕ್ಷ ರೂ.ಗಳು!
ಈಜಿಪ್ಟ್ ನ 36 ವರ್ಷದ ಎಮನ್ ಅಹಮದ್ ಎಂಬ ಗಜಗಾತ್ರದ ಮಹಿಳೆಯ ಮೈ ಭಾರ ಇಳಿಸಲು ಶಸ್ತ್ರ ಚಿಕಿತ್ಸೆಗಾಗಿ ಈ ಹಿಂದೆ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಆಶ್ವಾಸನೆ ನೀಡಿದ್ದರು.
ಈಜಿಪ್ಟ್ ರಾಜಧಾನಿ ಕೈರೋದಿಂದ ಆಕೆಯನ್ನು ಮುಂಬೈಗೆ ಚಿಕಿತ್ಸೆಗಾಗಿ ಕರೆತರಲು ಯಾವುದೇ ನೇರ ವಿಮಾನ ಇಲ್ಲ. ಮೇಲಾಗಿ ಎಮನ್‍ರನ್ನು ಕರೆತರಲು ಯಾವುದೇ ಖಾಸಗಿ ವಿಮಾನಗಳು ಮುಂದೆ ಬರುತ್ತಿಲ್ಲ.
ಆಕೆಗಾಗಿಯೇ ಏರ್ ಆ್ಯಂಬುೆಲೆನ್ಸ್ ಮಾರ್ಪಾಡು ಮಾಡಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ವಿಶ್ವದಲ್ಲಿನ ಬಹುತೇಕ ವಿಮಾನಗಳಲ್ಲಿ ಗರಿಷ್ಠ 136 ಕೆಜಿ ತೂಕದ ವ್ಯಕ್ತಿಯನ್ನು ಮಾತ್ರವೇ ಕರೆತರುವ ಅವಕಾಶವಿದೆ. ಈಗ ಈಕೆಯನ್ನು ಈಜಿಪ್ಟ್‍ನಿಂದ ತರಲು ವಿಮಾನವನ್ನು ವಿಶೇಷವಾಗಿ ಬದಲಿಸಬೇಕಿದೆ.
ಕಳೆದ 13 ವರ್ಷಗಳಿಂದಲೂ ಹಾಸಿಗೆಯಲ್ಲೇ ಮಲಗಿರುವ ಈಕೆ ಅಕ್ಯೂಟ್ ಓಬೆಸಿಟಿಯಿಂದ ಬಳಲುತ್ತಿದ್ದಾಳೆ. ಈಕೆಯ ಚಿಕಿತ್ಸೆಗೆ ಒಂದಿಲ್ಲೊಂದು ತೊಂದರೆಗಳು ಎದುರಾಗುತ್ತಲೇ ಇವೆ. ಮೊದಲು ಮೆಡಿಕಲ್ ವೀಸಾ ಸಿಗಲು ವಿಳಂಬವಾಯಿತು, ಈಗ ಆಕೆಯನ್ನು ಕರೆತರುವುದೇ ದೊಡ್ಡ ಸವಾಲಾಗಿದೆ.ಆಕೆಯನ್ನು ಮುಂಬಯಿಗೆ ಕರೆತರಲು ವಿಶೇಷ ತಂಡ ರಚಿಸಿದ್ದು, ಜೆಟ್ ಏರ್ ನೇಸ್, ಏರ್ ಇಂಡಿಯಾ ಹಾಗೂ ಈಜಿಪ್ಟ್ ಏರ್ ವೇಸ್ ಗಳಿಗೆ ಮನವಿ ಮಾಡಲಾಗಿದೆ ಎಂದು ವೈದ್ಯ ಡಾ. ಲಕ್ಡಾವಾಲಾ ತಿಳಿಸಿದ್ದಾರೆ.
Advertisement