ಭಾರತದ ನೋಟು ಮುದ್ರಣಕ್ಕೆ ಪೇಪರ್ ಪೂರೈಸುವುದಿಲ್ಲ: ಲಂಡನ್ ಕಂಪನಿ

ಭಾರತದ ನೋಟು ಮುದ್ರಣ ಮಾಡಲು ಇನ್ನು ಮುಂದೆ ಪೇಪರ್ ಪೂರೈಕೆ ಮಾಡುವುದಿಲ್ಲ ಎಂದು ಲಂಡನ್ ಮೂಲದ ಬ್ಯಾಂಕ್ ನೋಟು ಮುದ್ರಣ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತದ ನೋಟು ಮುದ್ರಣ ಮಾಡಲು ಇನ್ನು ಮುಂದೆ ಪೇಪರ್ ಪೂರೈಕೆ ಮಾಡುವುದಿಲ್ಲ ಎಂದು ಲಂಡನ್ ಮೂಲದ ಬ್ಯಾಂಕ್ ನೋಟು ಮುದ್ರಣ ಮಾಡುವ ಡೆ ಲಾ ರೋ ಕಂಪನಿ ಹೇಳಿದೆ.

500 ಹಾಗೂ 1.000 ರು ನೋಟು ನಿಷೇಧದ ನಂತರ 2.000 ಹಾಗೂ ಹೊಸ 5.00 ರು ನೋಟು ಮುದ್ರಣಕ್ಕಾಗಿ ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಇನ್ನು ಮುಂದೆ ಭಾರತದ ನೋಟು ಮುದ್ರಣ ಮಾಡಲು ಪೇಪರ್ ಸರಬರಾಜು ಮಾಡುವುದಿಲ್ಲ ಹಾಗೂ ಭಾರತೀಯ ನೋಟುಗಳನ್ನು ಮುದ್ರಣ ಸಂಬಂಧ ಯಾವುದೇ ಸಹಾಯ ಮಾಡುವುದಿಲ್ಲ ಎಂಗು ಕಂಪನಿ ತಿಳಿಸಿದೆ ಎಂದು ವರದಿಯಾಗಿದೆ.

ಪನಾಮಾ ಪೇಪರ್ಸ್ ಲೀಕ್ ಪ್ರಕರಣದಲ್ಲಿ ಶಾಮೀಲಾಗಿರುವ ಕಂಪನಿಗೆ ಹೊಸ ನೋಟುಗಳ ಮುದ್ರಣ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿತ್ತು.  ನಮ್ಮ ಕಂಪನಿ ಬಗ್ಗೆ ಮಾನಹಾನಿಯಾಗುವಂತ ಆರೋಪ ಮಾಡಲಾಗಿದೆ, ನಮ್ಮನ್ನು ಭಾರತದಲ್ಲಿ ಬ್ಲಾಕ್ ಲಿಸ್ಟ್ ನಲ್ಲಿ ಸೇರಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಹೀಗಾಗೀ ನಾವು ಭಾರತದ ನೋಟು ಮುದ್ರಣ ಮಾಡಲು ಪೇಪರ್ ಪೂರೈಸುವುದಿಲ್ಲ, ಹಾಗೆಯೇ ಪಾಕಿಸ್ತಾನದ ನೋಟು ಪ್ರಿಂಟ್ ಮಾಡಲು ನಾವು ಪೇಪರ್ ಪೂರೈಸಿಲ್ಲ ಜೊತೆಗೆ ಪಾಕಿಸ್ತಾನ ನೋಟುಗಳನ್ನು ನಾವು ಮುದ್ರಿಸಿಲ್ಲ ಎಂದು ಸ್ಪಷ್ಟ ಪಡಿಸಿದೆ, ಒಂದು ದೇಶ ಕರೆನ್ಸಿ ಮುದ್ರಣ ಮಾಡಲು ಪೂರೈಸುವ ಪೇಪರ್ ಅನ್ನು ಮತ್ತೊಂದು ದೇಶಕ್ಕೆ ನಾವು ಸರಬರಾಜು ಮಾಡುವುದಿಲ್ಲ ಎಂದು ಹೇಳಿದೆ.

ಪ್ರಪಂಚದಾದ್ಯಂತ ಸುಮಾರು 140 ದೇಶಗಳ ಬ್ಯಾಂಕ್ ನೋಟು ಮುದ್ರಣಕ್ಕೆ ಕಂಪನಿ ಕಾಗದ ಪೂರೈಸುತ್ತಿದ್ದು, ನಮ್ಮ ಕಂಪನಿಯ ಗೌರವ ಕಾಪಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡೆ ಲಾ ರೋ ಕಂಪನಿ ಎಚ್ಚರಿಸಿದೆ.

ಹಣಕಾಸು ಸಚಿವ ಅರುಣ್ ಜೇಟ್ಲಿ ಆಮ್ ಆದ್ಮಿ ಪಕ್ಷದ ಆರೋಪವನ್ನು ತಳ್ಳಿ ಹಾಕಿದ್ದಾರೆ. ಯಾವುದೇ ಬ್ರಿಟಿಷ್ ಕಂಪನಿ ಜೊತೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com