500, 1000 ರೂ ನೋಟುಗಳ ಸಿಂಧುತ್ವ ರದ್ದತಿಗೆ ಆರ್ ಬಿಐ ಕಾಯ್ದೆಗೆ ತಿದ್ದುಪಡಿ

500, 1000 ರೂ ನೋಟುಗಳ ಸಿಂಧುತ್ವವನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆಗೆ ತಿದ್ದುಪಡಿ ತರಲಿದೆ.
ಆರ್ ಬಿಐ ಸಂಗ್ರಹ ಚಿತ್ರ
ಆರ್ ಬಿಐ ಸಂಗ್ರಹ ಚಿತ್ರ
ನವದೆಹಲಿ: 500, 1000 ರೂ ನೋಟುಗಳ ಸಿಂಧುತ್ವವನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆಗೆ ತಿದ್ದುಪಡಿ ತರಲಿದೆ. 
ಮುಂದಿನ ವರ್ಷದ ಬಜೆಟ್ ನಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಿರುವ ಸಾಧ್ಯತೆ ಇದ್ದು, ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಪ್ರಕಟಿಸಿದ ನೋಟು ಅಮಾನ್ಯ ನಿರ್ಧಾರಕ್ಕೆ ಪೂರಕವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ನ ಕಾಯ್ದೆಗೆ ತಿದ್ದುಪಡಿ ತರಲಿದ್ದು ಮಾಚ್.31 ರಿಂದ ಜಾರಿಗೆ ಬರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
1978 ರಲ್ಲಿ ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದಾಗಲೂ ಸಹ ನೋಟು ರದ್ದತಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. ಆರ್ ಬಿಐ ನ ಸೆಕ್ಷನ್ 26(2) ರ ಪ್ರಕಾರ ಕೇಂದ್ರ ಸರ್ಕಾರ ಆರ್ ಬಿಐ ನ ಕೇಂದ್ರ ಮಂಡಳಿಯ ಶಿಫಾರಸಿನ ಆಧಾರದಲ್ಲಿ ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಲಿದೆ. 
ಒಟ್ಟು 15.5 ಲಕ್ಷ ಕೋಟಿ ರೂಪಾಯಿಯ ಪೈಕಿ ಈ ವರೆಗೂ 12 ಲಕ್ಷ ಕೋಟಿ ಮೊತ್ತದ ಹಳೆಯ ನೋಟುಗಳು ಬ್ಯಾಂಕ್ ಗೆ ಸೇರಿದ್ದು ಡಿಸೆಂಬರ್ ಅಂತ್ಯಕ್ಕೆ 13 ಲಕ್ಷ ಕೋಟಿ ಮೊತ್ತದ ಹಳೆಯ ನೋಟುಗಳು ಬ್ಯಾಂಕ್ ಗೆ ಸೇರಲಿವೆ ಎಂದು ಕೇಂದ್ರ ಸರ್ಕಾರ ನಿರೀಕ್ಷಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com