ಬುರ್ಖಾ ತೆಗೆಯಲು ಶಾಲೆಯ ಮುಖ್ಯ ಶಿಕ್ಷಕಿ ಒತ್ತಾಯ: ರಾಜೀನಾಮೆ ನೀಡಿದ ಶಿಕ್ಷಕಿ

ಶಾಲೆಯ ಹಿರಿಯರು ತರಗತಿಯಲ್ಲಿ ಪಾಠ ಮಾಡುವ ವೇಳೆ ಬುರ್ಖಾ ತೆಗೆಯಲು ಹೇಳಿದ್ದರಿಂದ ಶಿಕ್ಷಕಿಯೊಬ್ಬರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿರುವ ಘಟನೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬಯಿ: ಶಾಲೆಯ ಹಿರಿಯರು ತರಗತಿಯಲ್ಲಿ ಪಾಠ ಮಾಡುವ ವೇಳೆ ಬುರ್ಖಾ ತೆಗೆಯಲು ಹೇಳಿದ್ದರಿಂದ ಶಿಕ್ಷಕಿಯೊಬ್ಬರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿರುವ ಘಟನೆ ಮುಂಬಯಿಯ ಕುರ್ಲಾ ಸಬ್ ಅರ್ಬನ್ ನ ಶಾಲೆಯೊಂದರಲ್ಲಿ ನಡೆದಿದೆ.

ಶಬೀನಾ ಖಾನ್ ನಂಜೀನ್ ಬುಧವಾರ ತಮ್ಮ ಶಿಕ್ಷಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಧಾರ್ಮಿಕ ಭಾವನೆಗಳ ವಿಚಾರದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳಲು ನನಗೆ ಇಷ್ಟವಿಲ್ಲ. ಹೀಗಾಗಿ ರಾಜಿನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.

ಹೊಸದಾಗಿ ಶಾಲೆಗೆ ಬಂದಿರುವ ಮುಖ್ಯ ಶಿಕ್ಷಕಿ ಶಬೀನಾ ಗೆ ತರಗತಿಯಲ್ಲಿ ಪಾಠ ಮಾಡುವ ವೇಳೆ ಬುರ್ಖಾ ಮತ್ತು ಹಿಜಬ್ ತೆಗೆಯುವಂತೆ ಸೂಚಿಸಿದ್ದಾರೆ. ಆದರೆ ಇದಕ್ಕೊಪ್ಪದ ಶಬೀನಾ ಡಿಸೆಂಬರ್ 6 ರಂದು ರಾಜಿನಾಮೆ ನೀಡಿದ್ದಾರೆ.

ಕಳೆದ ಮೂರು ವರ್ಷಗಳಿಂದ ಆಕೆ ಇಲ್ಲಿ ಕೆಲಸ ಮಾಡುತ್ತಿದ್ದು, ಆಕೆಯ ರಾಜಿನಾಮೆ ಪತ್ರವನ್ನು ಶಾಲಾ ಆಡಳಿತ ಮಂಡಳಿಗೆ ರವಾನಿಸಲಾಗಿದೆ. ಮಂಡಳಿಯ ಸಲಹೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಶಾಲೆಯ ಪ್ರಾಂಶಪಾಲರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com