
ನವದೆಹಲಿ: 500 ಹಾಗೂ 1000 ರು ಮುಖಬೆಲೆಯ ನೋಟುಗಳ ನಿಷೇಧದ ನಂತರ ಜನರಿಗೆ ಸರಿಯಾಗಿ ಹಣ ಸಿಗ್ತಿಲ್ಲ. ಪೈಸೆ ಪೈಸೆಗೂ ಪರದಾಡುವ ಪರಿಸ್ಥಿತಿ ಬಂದಿದೆ. ಹೀಗಾಗಿ ಹೆಚ್ಚು ನೋಟು ಮುದ್ರಿಸಲು ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ.
ಹೆಚ್ಚಿನ ನೋಟು ಮುದ್ರಣಕ್ಕಾಗಿ 20 ಸಾವಿರ ಟನ್ ಕರೆನ್ಸಿ ಪೇಪರ್ ವಿದೇಶದಿಂದ ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡಲಾಗಿದೆ. ಡಿಸೆಂಬರ್ ಅಂತ್ಯದೊಳಗೆ 8 ಸಾವಿರ ಟನ್ ಕರೆನ್ಸಿ ಪೇಪರ್ ವಿದೇಶದಿಂದ ಭಾರತಕ್ಕೆ ಬರಲಿದೆ ಅಂತ ಕೇಂದ್ರ ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ. ಹಣಕಾಸು ಇಲಾಖೆ ಹಾಗೂ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಶಿಕಾಂತ್ ದಾಸ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಅನುಮತಿ ನೀಡಲಾಗಿದೆ.
ದೊಡ್ಡ ಪ್ರಮಾಣದಲ್ಲಿ ಈ ಸಲ ಪೇಪರ್ ಆಮದು ಮಾಡಿಕೊಳ್ಳಲಾಗುತ್ತಿದೆ. ಈಗ ಕೆಲವೊಂದು ನೋಟು ಮುದ್ರಣ ಪೇಪರ್ ಅನ್ನು ನಾವೇ ತಯಾರಿಸಿಕೊಳ್ಳುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತಿ ವರ್ಷ ಸುಮಾರು 25 ಸಾವಿರ ಟನ್ ನೋಟು ಮದ್ರಣ ಪೇಪರ್ ಆಮದು ಮಾಡಿಕೊಳ್ಳಲಾಗುತ್ತದೆ.
ಸ್ವಿಟ್ಜರ್ ಲ್ಯಾಂಡ್, ಸ್ವೀಡನ್ , ಪೋಲೆಂಡ್ ಸೇರಿದಂತೆ ಸುಮಾರು 8 ದೇಶಗಳು ವಿವಿಧ ದೇಶಗಳ ಕರೆನ್ಸಿ ಮುದ್ರಣಕ್ಕಾಗಿ ಪೇಪರ್ ಸರಬರಾಜು ಮಾಡುತ್ತವೆ. ಭದ್ರತಾ ದೃಷ್ಟಿಯಿಂದ ಬ್ರಿಟನ್ ಹಾಗೂ ಜರ್ಮನಿ ಕರೆನ್ಸಿ ಮುದ್ರಣಾ ಕಂಪನಿಗಳನ್ನು ಕೇಂದ್ರ ಗೃಹ ಸಚಿವಾಲಯ ಬ್ಲಾಕ್ ಲಿಸ್ಟ್ ಗೆ ಸೇರಿಸಿದೆ.
Advertisement