ಈದ್ ಮಿಲಾದ್ ಹಬ್ಬಕ್ಕೆ ರಾಷ್ಟ್ರಪತಿ, ಪ್ರಧಾನಿ ಶುಭಾಶಯ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಸಲ್ಮಾನ ಬಾಂಧವರಿಗೆ...
ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ
ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ
Updated on
ನವದೆಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಸಲ್ಮಾನ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯ ಕೋರಿದ್ದಾರೆ.
ಪ್ರವಾದಿ ಮೊಹಮ್ಮದರ ಹುಟ್ಟಿದ ದಿನವನ್ನು ಈದ್ ಮಿಲಾದ್ ಆಗಿ ಮುಸಲ್ಮಾನರು ಆಚರಿಸುತ್ತಾರೆ. 
ಭಾರತ ಹಾಗೂ ವಿದೇಶದಲ್ಲಿರುವ ಎಲ್ಲಾ ಮುಸಲ್ಮಾನ ಬಾಂಧವರಿದೆ ಈದ್ ಮಿಲಾದ್ ಹಬ್ಬದ ಅಂಗವಾಗಿ ನನ್ನ ಮನಪೂರ್ವಕ ಶುಭಾಶಯಗಳು ಎಂದು ರಾಷ್ಟ್ರಪತಿ ಟ್ವೀಟ್ ಮಾಡಿದ್ದಾರೆ.
ಪ್ರವಾದಿ ಮೊಹಮ್ಮದರ ಸಂದೇಶಗಳು ನಮ್ಮಲ್ಲಿ ಸಹೋದರತ್ವ, ಭಾತೃತ್ವ, ಸಹಿಷ್ಣುತೆಯನ್ನು ಮೂಡಿಸಲಿ ಎಂದು ಆಶಿಸಿದ್ದಾರೆ.
ಪ್ರಧಾನಿ ಮೋದಿಯವರು ಟ್ವೀಟ್ ಮಾಡಿ, ಮಿಲದ್-ಉನ್-ನಬಿ ಹಬ್ಬದ ಪ್ರಯುಕ್ತ ಜನತೆಗೆ ಶುಭಾಶಯಗಳು, ಪ್ರವಾದಿ ಮೊಹಮ್ಮದರ ಹುಟ್ಟುಹಬ್ಬ ನಮ್ಮಲ್ಲಿ ಸಾಮರಸ್ಯ, ಏಕತೆಯನ್ನು ಮೂಡಿಸಲಿ ಮತ್ತು ಎಂದೆಂದಿಗೂ ಶಾಂತಿ, ಸಮೃದ್ಧಿಯನ್ನು ಉಂಟುಮಾಡಲಿ ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com