ಶ್ರೀನಗರ: ಕಳೆದ ತಿಂಗಳು ನಗ್ರೊಟಾದ ಸೇನಾ ಶಿಬಿರದ ಮೇಲೆ ನಡೆದ ದಾಳಿಗೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ತನಿಖೆ ಆರಂಭಿಸುತ್ತಿರುವ ಹೊತ್ತಿನಲ್ಲಿ, ದಾಳಿ ನಡೆಸಿದ ಉಗ್ರಗಾಮಿಗಳು ಆವರಣಕ್ಕೆ ಪ್ರವೇಶ ಪಡೆಯುವ ಮೊದಲು ಸೈನಿಕನನ್ನು ಕೊಲ್ಲಲು ಶಬ್ದ ಶಾಮಕ ಶಸ್ತ್ರಾಸ್ತ್ರ(ಸೈಲೆನ್ಸರ್ ಫಿಟ್ಟೆಡ್ ವೆಪನ್)ನ್ನು ಬಳಸಿದ್ದರು ಎಂದು ತಿಳಿದುಬಂದಿದೆ.