ನೋಟು ನಿಷೇಧ ಹಣಕಾಸು ಕ್ಷೇತ್ರದ ಪೋಖ್ರಾನ್ ಪರೀಕ್ಷೆ: ಎಸ್ ಗುರುಮೂರ್ತಿ

ನೋಟು ನಿಷೇಧದ ಕ್ರಮವನ್ನು ಖ್ಯಾತ ಅಂಕಣಕಾರ ಎಸ್ ಗುರುಮೂರ್ತಿ ಹಣಕಾಸು ಕ್ಷೇತ್ರದ ಪೋಖ್ರಾನ್ ಪರೀಕ್ಷೆ ಎಂದು ಬಣ್ಣಿಸಿದ್ದಾರೆ.
ನೋಟು ನಿಷೇಧ ಹಣಕಾಸು ಕ್ಷೇತ್ರದ ಪೋಖ್ರಾನ್ ಪರೀಕ್ಷೆ: ಎಸ್ ಗುರುಮೂರ್ತಿ
ನೋಟು ನಿಷೇಧ ಹಣಕಾಸು ಕ್ಷೇತ್ರದ ಪೋಖ್ರಾನ್ ಪರೀಕ್ಷೆ: ಎಸ್ ಗುರುಮೂರ್ತಿ
ನವದೆಹಲಿ: 500, 1000 ರೂ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ ಒಂದು ತಿಂಗಳ ನಂತರವೂ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಚರ್ಚೆ ನಡೆಯುತ್ತಿದ್ದು, ನೋಟು ನಿಷೇಧದ ಕ್ರಮವನ್ನು ಖ್ಯಾತ ಅಂಕಣಕಾರ ಎಸ್ ಗುರುಮೂರ್ತಿ ಹಣಕಾಸು ಕ್ಷೇತ್ರದ ಪೋಖ್ರಾನ್ ಪರೀಕ್ಷೆ ಎಂದು ಬಣ್ಣಿಸಿದ್ದಾರೆ. 
ನೋಟು ನಿಷೇಧದ ನಿರ್ಧಾರವನ್ನು ಹಣಕಾಸು ಕ್ಷೇತ್ರದ ಪೋಖ್ರಾನ್ ಪರೀಕ್ಷೆ ಎಂದು ಹೇಳಿರುವ ಗುರುಮೂರ್ತಿ ಅವರು, ಕೇಂದ್ರ ಸರ್ಕಾರದ ನಿರ್ಧಾರವನ್ನು ತಿಳಿಯಲು ವಿಶೇಷವಾದ ತಿಳುವಳಿಕೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. " ಜನರ ಬಳಿ ಅತಿ ಹೆಚ್ಚು ಹಣವಿದ್ದಾಗ ಅನಗತ್ಯ ವಸ್ತುಗಳನ್ನು ಖರೀದಿಸುವ ಇಚ್ಛೆ ಉಂಟಾಗುತ್ತದೆ. ಇದರಿಂದಾಗಿ ಅನಗತ್ಯ ಖರ್ಚು ಹೆಚ್ಚಾಗಲಿದೆ. ನೋಟು ನಿಷೇಧದ ಕ್ರಮದಿಂದ ದೇಶದಲ್ಲಿ ಬದಲಾವಣೆ ಉಂಟಾಗಲಿದೆ ಎಂದು ಗುರುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. 
ಪೊಖ್ರಾನ್ ಅಣು ಪರೀಕ್ಷೆ ನಡೆಸಿದಾಗ ದೇಶಕ್ಕೆ ಸಂಬಂಧಿಸಿದಂತೆ ನಿರೀಕ್ಷೆಗೂ ಮೀರಿದ ಬದಲಾವಣೆಗಳು ಸಂಭವಿಸಿದವು, ಅಮೆರಿಕ ಭಾರತದತ್ತ ಬೆರಗುಗಣ್ಣಿನಿಂದ ನೋಡುತ್ತದೆ ಎಂದು ಯಾರಿಗೆ ತಾನೆ ತಿಳಿದಿತ್ತು ಒಂದು ವೇಳೆ ಪೊಖ್ರಾನ್ ಪರೀಕ್ಷೆ ನಡೆಯದೇ ಇದ್ದರೆ ಅಮೆರಿಕ ದೇಶದತ್ತ ತಿರುಗಿಯೂ ನೋಡುತ್ತಿರಲಿಲ್ಲ ಎಂದು ಗುರುಮೂರ್ತಿ ಹೇಳಿದ್ದಾರೆ. 
ನೋಟು ನಿಷೇಧದ ಕ್ರಮವನ್ನು ಪೊಖ್ರಾನ್ ಅಣು ಪರೀಕ್ಷೆಯಂತಹ ಕಠಿಣ ನಿರ್ಧಾರಕ್ಕೆ ಹೋಲಿಕೆ ಮಾಡಿರುವ ಗುರುಮೂರ್ತಿ, ಪೊಖ್ರಾನ್ ಅಣು ಪರೀಕ್ಷೆ ನಡೆಸಿದಾಗ ಇಡೀ ಜಗತ್ತೇ ಭಾರತದ ಬಗ್ಗೆ ಅಚ್ಚರಿಗೊಂಡಿತ್ತು. ಪರಿಣಾಮ ಊಹೆಗೂ ಮೀರಿದ ಬದಲಾವಣೆಗಳು ನಡೆದಿದ್ದವು, ಈಗ ನೋಟು ನಿಷೇಧದಿಂದಲೂ ಊಹೆಗೂ ಮೀರಿದ ಬದಲಾವಣೆಗಳು ಸಂಭವಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
ನೋಟು ನಿಷೇಧದ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಗುರುಮೂರ್ತಿ, 2004 ರಿಂದ ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ನಡೆದಿದ್ದ ಆರ್ಥಿಕ ಅಸಮರ್ಪಕ ನಿರ್ವಹಣೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೋಟು ನಿಷೇಧದ ಕ್ರಮವನ್ನು ಘೋಷಿಸಿದ್ದಾರೆ. ಈಗ ಅಲ್ಲದಿದ್ದರೆ ಇನ್ನು ಮುಂದೆಂದಿಗೂ ನೋಟು ನಿಷೇಧದ ಕ್ರಮವನ್ನು ಕೈಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಗುರುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com