ಮುಸ್ಲಿಂ ಏರಿಯಾಗಳಲ್ಲಿರುವ ಬ್ಯಾಂಕ್ ಗಳಿಗೆ ರೆಡ್ ಜೋನ್ ಹಣೆಪಟ್ಟಿ: ನೋಟು ನಿಷೇಧದ ಬಗ್ಗೆ ಒವೈಸಿ

ಮುಸ್ಲಿಮರಿರುವ ಪ್ರದೇಶಗಳಲ್ಲಿ ಬ್ಯಾಂಕ್ ಗಳನ್ನು ತೆರೆದರೆ ಅದನ್ನು ರೆಡ್ ಜೋನ್ ಹಣೆಪಟ್ಟಿ ಕಟ್ಟಲಾಗುತ್ತದೆ ಎಂದು ಆರೋಪಿಸಿದ್ದಾರೆ.
ಅಸಾವುದ್ದೀನ್ ಒವೈಸಿ
ಅಸಾವುದ್ದೀನ್ ಒವೈಸಿ
ಹೈದರಾಬಾದ್: ಎಐಎಂಐಎಂ ಪಕ್ಷದ ಸಂಸದ ಅಸಾವುದ್ದೀನ್ ಒವೈಸಿ ನೋಟು ನಿಷೇಧದ ಬಗ್ಗೆ ಹೇಳಿಕೆ ನೀಡೀದ್ದು, ಮುಸ್ಲಿಮರಿರುವ ಪ್ರದೇಶಗಳಲ್ಲಿ ಬ್ಯಾಂಕ್ ಗಳನ್ನು ತೆರೆದರೆ ಅದನ್ನು ರೆಡ್ ಜೋನ್ ಹಣೆಪಟ್ಟಿ ಕಟ್ಟಲಾಗುತ್ತದೆ ಎಂದು ಆರೋಪಿಸಿದ್ದಾರೆ. 
ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ಮಾತನಾಡಿರುವ ಅಸಾವುದ್ದೀನ್ ಒವೈಸಿ, ಮುಸ್ಲಿಮರಿರುವ ಪ್ರದೇಶಗಳಲ್ಲಿ ಬ್ಯಾಂಕಿಂಗ್ ನೆಟ್ವರ್ ನ ಕೊರತೆ ಇದೆ. ಮುಸ್ಲಿಮರು ಇರುವ ಹಲವು ಪ್ರದೇಶಗಳಲ್ಲಿ ಬ್ಯಾಂಕ್ ಗಳು ಸಹಜವಾಗಿ ಇರಬೇಕಾದ ಸ್ಥಿತಿಯಲ್ಲಿ ಇಲ್ಲ. ಬೇರೆ ಪ್ರದೇಶಗಳಿಗೆ ಹೋಲಿಸಿದರೆ ಬ್ಯಾಂಕ್ ಗಳಲ್ಲಿ ನೀಡಲಾಗುವ ಸಾಲದ ಪ್ರಮಾಣವೂ ಕಡಿಮೆ ಇದೆ ಎಂದು ಒವೈಸಿ ಆರೋಪಿಸಿದ್ದಾರೆ. 
ನೋಟು ನಿಷೇಧದ ನಂತರ ಎಟಿಎಂ ಗಳಲ್ಲಿ ಹಣ ಸಿಗುತ್ತಿಲ್ಲ. ಇಡೀ ದೇಶದ ಜನತೆ ಸಮಸ್ಯೆ ಎದುರಿಸುತ್ತಿದ್ದಾರೆ. ಮುಸ್ಲಿಮ್ ಬಾಹುಳ್ಯವಿರುವ ಪ್ರದೇಶಗಳಲ್ಲಿ ಎಟಿಎಂ ಗಳು ಕೆಲಸ ಮಾಡುತ್ತಿಲ್ಲ. ಒಂದು ವೇಳೆ ಬ್ಯಾಂಕ್ ಗಳು ತೆರೆದರೆ ಅವುಗಳನ್ನು ರೆಡ್ ಜೋನ್ ಎಂದು ಘೋಷಿಸಲಾಗುತ್ತಿದೆ ಎಂದು ಒವೈಸಿ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com