ಜಮ್ಮು: ಭಾರತೀಯ ಸೇನೆಯ ಮೇಜರ್ ಅನಿತಾ ಕುಮಾರಿ ತಮ್ಮ ಖಾಸಗಿ ಪಿಸ್ತೂಲ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿನ್ನೆ ಅಥವಾ ಮೊನ್ನೆ ಮಧ್ಯರಾತ್ರಿ ಇವರು ತಮ್ಮ ನಿವಾಸದಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡಿರಬಹುದು ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಸೇನಾಧಿಕಾರಿ ಕಳೆದೆರಡು ದಿನಗಳಿಂದ ಮನೆಯಿಂದ ಹೊರಬಂದಿರಲಿಲ್ಲ. ಕಚೇರಿಗೂ ಬರದಿದ್ದ ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಯಾರಿಗೂ ಗೊತ್ತಿರಲಿಲ್ಲ. ನೆರೆಮನೆಯವರು ಬಾಗಿಲು ಮುರಿದು ಒಳಗೆ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಅನಿತಾ ಕುಮಾರಿ ಹಿಮಾಚಲ ಪ್ರದೇಶದ ಚಂಬಾ ಪ್ರದೇಶಕ್ಕೆ ಸೇರಿದವರಾಗಿದ್ದು 259 ಕ್ಷೇತ್ರ ಪೂರೈಕೆ ಉಗ್ರಾಣಕ್ಕೆ ನೇಮಕಗೊಂಡಿದ್ದರು. ಇವರ ಸಾವಿನ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಿದೆ.