ರೋಹಿತ್ ವೇಮುಲ ಪ್ರತಿಭಟನೆ ಪ್ರಜಾಪ್ರಭುತ್ವದ ಒಂದು ಭಾಗವಾಗಿತ್ತು: ಪವನ್ ಕಲ್ಯಾಣ್

ಭಾರತೀಯ ಜನತಾ ಪಕ್ಷದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮುಂದುವರಿಸಿರುವ ಟಾಲಿವುಡ್ ನಟ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ...
ಪವನ್ ಕಲ್ಯಾಣ್
ಪವನ್ ಕಲ್ಯಾಣ್

ಹೈದರಾಬಾದ್: ಭಾರತೀಯ ಜನತಾ ಪಕ್ಷದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮುಂದುವರಿಸಿರುವ ಟಾಲಿವುಡ್ ನಟ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್, ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಜೊತೆ ಸರ್ಕಾರ ನಡೆದುಕೊಂಡ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಈ ಸಂಬಂಧ ತಮ್ಮ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಪವನ್ ಕಲ್ಯಾಣ್ , ಪ್ರಜಾಪ್ರಭುತ್ವದ ಮಿತಿಯೊಳಗೆ ರೋಹಿತ್ ಪ್ರತಿಭಟನೆ ನಡೆಸಿದ್ದರು. ದೇಶದ ಲಕ್ಷಾಂತರ ಮಂದಿ ವಯಕ್ತಿಕವಾಗಿ ಹೇಗೆ ಬಿಜೆಪಿಯನ್ನು ವಿರೋಧಿಸುತ್ತಾರೋ ಹಾಗೆಯೇ, ರೋಹಿತ್ ಕೂ ಬಿಜೆಪಿ ಬಗ್ಗೆ ವಿರೋಧ ವ್ಯಕ್ತ ಪಡಿಸಿದ್ದರು.

ಆದರೆ ಅವರಿಗೆ ಕಿರುಕುಳ ನೀಡುವ ಅಧಿಕಾರ ನೀಡಿರಲಿಲ್ಲ. ಕೇಸರೀಕರಣದ ವಿರುದ್ಧ ರೋಹಿತ್ ವೇಮುಲಾ ವಿವಿಯೊಳಗೆ ವಿರೋಧಿ ಗುಂಪಿನ ಮುಂದೆ ಮಾತನಾಡಿದ್ದರು. ವಿದ್ಯಾರ್ಥಿಗಳ ಜೊತೆಗಿನ ಈ ಸೈದ್ದಾಂತಿಕ ಬಿನ್ನಾಭಿಪ್ರಾಯದ ಬಗ್ಗೆ ಸರ್ಕಾರ  ಗಮನ ಹರಿಸಬೇಕಿತ್ತು, ಆದರೆ ಕೇಂದ್ರ ಸರ್ಕಾರ ಇದನ್ನು ಏಕೆ ವಯಕ್ತಿಕವಾಗಿ ಪರಿಗಣಿಸಿತು ಎಂದು ನನಗೆ ಅರ್ಥವಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.
ರೋಹಿತ್ ವೇಮುಲ ಪ್ರತಿಭಟನೆ ಕಾನೂನು ಸುವ್ಯವಸ್ಥೆ ಹಾಳು ಮಾಡಿದ್ದರೇ ಆಗ  ಸಂಬಂಧಪಟ್ಟವರು ಶಿಸ್ತು ಕ್ರಮ ಜರುಗಿಸಬೇಕಿತ್ತು. ಆದರೆ ಕೇಂದ್ರ ಸರ್ಕಾರ ಇದನ್ನು ತೀರಾ ವಯಕ್ತಿಕ ವಿಷಯ ಎಂಬಂತೆ ವರ್ತಿಸಿತ್ತು ಎಂದು ಟ್ಟೀಟ್ ಮಾಡಿದ್ದಾರೆ.

ರೋಹಿತ್ ವೇಮುಲಾಗೆ ನೀಡಿದ ಶಿಕ್ಷೆ ಹಾಗೂ ಕ್ಯಾಂಪಸ್ ನಿಂದ ಅಮಾನತು ಮಾಡಿದ್ದ ಆತ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿತು. ಆತನನ್ನು ಸರಿಯಾಗಿ ಕೌನ್ಸೆಲಿಂಗ್ ಮಾಡಿದಿದ್ದರೇ ಒಬ್ಬ ಬುದ್ದಿವಂತ ವಿದ್ಯಾರ್ಥಿಯನ್ನು ರಕ್ಷಿಸಬಹುದಿತ್ತು ಎಂದು ಪವನ್ ಕಲ್ಯಾಣ್ ಟ್ವೀಟ್ ಮಾಡಿದ್ದಾರೆ.

ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣದ ಅತಿ ದೊಡ್ಜ ದುರಂತೆ ಎಂದರೇ, ಆತ್ಮಹತ್ಯೆ ವೇಳೆ ಬಿಜೆಪಿ ವಿರೋಧಿ ಪಕ್ಷಗಳು ಪ್ರಕರಣವನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸಿದವು, ಇನ್ನು ಬಿಜೆಪಿ ರೋಹಿತ್ ವೇಮುಲಾ ದಲಿತನೇ ಅಥವಾ ಬೇರೆ ಯಾವ ಜಾತಿಯವನು ಎಂಬುದನ್ನು ಪತ್ತೆ ಹಚ್ಚಲು ಮುಂದಾದವು. ಭವಿಷ್ಯದಲ್ಲಿ ಇಂಥ ಆತ್ಮಹತ್ಯೆ ಪ್ರಕರಣಗಳನ್ನು ಹೇಗೆ ತಡೆಯಬಹುದು ಎಂಬುದಕ್ಕೆ ಉತ್ತರಿಸಲು ಎಲ್ಲರೂ ವಿಫಲರಾದರು ಎಂದು ಟ್ವೀಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com